ಜಾರ್ಖಂಡಗೆ ತೆರಳಿದ 22 ವಲಸೆ ಕಾರ್ಮಿಕರು

BKT NEWS 31-1
Published on

ಬಾಗಲಕೋಟೆ: ಜಿಲ್ಲೆಯಲ್ಲಿ ನೆಲೆಸಿದ್ದ ಜಾರ್ಖಂಡ್‌ನ 22 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ವತಿಯಿಂದಲೇ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿ ಜಾರ್ಖಂಡನತ್ತ ತೆರಳಲು ಬೆಂಗಳೂರಿಗೆ ಕಳುಹಿಸಿ ಕೊಡಲಾಯಿತು.

ಜೀವನ ನಿರ್ವಹಣೆಗೆ ಕೆಲಸ ಅರಿಸಿ ಬಾಗಲಕೋಟೆ ಜಿಲ್ಲೆಗೆ ಬಂದಿದ್ದ ಈ ವಲಸೆ ಕಾರ್ಮಿಕರು, ಲಾಕ್‌ಡೌನ್ ಹಿನ್ನೆಲೆ ಇಲ್ಲಿಯೇ ಸಿಲುಕಿಕೊಂಡಿದ್ದರು. ಬಾಗಲಕೋಟೆ ಜಿಲ್ಲಾಡಳಿತದಿಂದಲೇ ಖರ್ಚು ಭರಿಸಿ ಬಸ್ ಮೂಲಕ ಶನಿವಾರ ಕಳುಹಿಸಿಕೊಡಲಾಯಿತು. ನಂತರ ಬೆಂಗಳೂರಿನಿಂದ ಶ್ರಮಿಕ ರೈಲಿನ ಮೂಲಕ ಭಾನುವಾರ ಸಂಜೆ ಜಾರ್ಖಡನತ್ತ ತೆರಳಿದರು. ಅದಕ್ಕೂ ಮೊದಲು ನವನಗರದ ಬಸ್ ನಿಲ್ದಾಣದಲ್ಲಿ ಕಾರ್ಮಿಕರನ್ನು ವಿಶೇಷ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು. ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು.

ಬೆಂಗಳೂರಿಗೆ ಕಳುಹಿಸುವ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ, ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ನೋಡಲ್ ಅಧಿಕಾರಿ ವೆಂಕಟೇಶ ಸೇರಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net