

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಉಪವಿಭಾಗದಲ್ಲಿ ಬರುವ 89 ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಚುನಾವಣೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಜೇಂದ್ರ ಸೋಮವಾರ ಅಧಿಸೂಚನೆ ಹೊರಡಿಸಿ, ಚುನಾವಣಾ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಡಿ.12 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು 14 ಕೊನೆಯ ದಿನವಾಗಿದೆ. ಮತದಾನ 22 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ಮತ ಎಣಿಕೆ 30 ರಂದು ಬೆಳಗ್ಗೆ 8 ರಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜಮಖಂಡಿ ತಾಲೂಕಿನಲ್ಲಿ ಆಲಗೂರ 17, ಬಿದರಿ 27, ಚಿಕ್ಕಪಡಸಲಗಿ 18, ಗೋಠೆ 20, ಹಿರೇಪಡಸಲಗಿ 24, ಹುಲ್ಯಾಳ 16, ಹುನ್ನೂರ 25, ಜಂಬಗಿ ಬಿ.ಕೆ. 20, ಕಡಪಟ್ಟಿ 10, ಕಂಕಣವಾಡಿ 16, ಕನ್ನೊಳ್ಳಿ 21, ಕೊಣ್ಣೂರ 23, ಕುಂಬಾರಹಳ್ಳ 18, ಕುಂಚನೂರ 19, ಲಿಂಗನೂರ 19, ಮದರಖಂಡಿ 22, ಮೈಗೂರ 21, ಮುತ್ತೂರ 16, ಸಾವಳಗಿ 32, ಶೂರ್ಪಾಲಿ 19, ತೊದಲಬಾಗಿ 22, ತುಂಗಳ 19, ಕಾಜಿಬೀಳಗಿ 10, ಸಿದ್ದಾಪುರ 13, ಮರೇಗುದ್ದಿ 15, ಅಡಿಹುಡಿ 14 ಸ್ಥಾನಗಳು ಸೇರಿದಂತೆ ಒಟ್ಟು 26 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಮುಧೋಳ ತಾಲೂಕಿನನಲ್ಲಿ ನಾಗರಾಳ 22, ಮುಗಳಖೋಡ 22, ಮಳಲಿ 15, ಕುಳಲಿ 17, ಶಿರೋಳ 31, ಮಂಟೂರ 28, ಹಲಗಲಿ 14, ಉತ್ತೂರ 22, ಒಂಟಗೋಡಿ 19, ಇಂಗಳಗಿ 17, ವಜ್ಜರಮಟ್ಟಿ 9, ಮಾಚಕನೂರ 21, ಚಿಚಖಂಡಿ ಕೆ.ಡಿ. 19, ಸೋರಗಾಂವ 16, ಮೆಳ್ಳಿಗೇರಿ 9, ಬರಗಿ 16, ಗುಲಗಾಲಜಂಬಗಿ 12, ಹೆಬ್ಬಾಳ 20, ಕಸಬಾಜಂಬಗಿ 14, ಮೆಟಗುಡ್ಡ 21, ಭಂಟನೂರ 19, ದಾದನಟ್ಟಿ 13 ಸ್ಥಾನಗಳು ಸೇರಿದಂತೆ ಒಟ್ಟು 24 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಜರುಗಲಿದೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಆಸಂಗಿ ಗ್ರಾಮ ಪಂಚಾಯಿತಿ 22, ಚಿಮ್ಮಡ 28, ಗೋಲಭಾವಿ 19, ಹಳಿಂಗಳಿ 19, ಹನಗಂಡಿ 24, ಹಿಪ್ಪರಗಿ 22, ಜಗದಾಳ 20, ಕುಲಹಳ್ಳಿ 21, ನಾವಲಗಿ 20, ಸಸಾಲಟ್ಟಿ 21, ತಮದಡ್ಡಿ 8, ಯಲ್ಲಟ್ಟಿ 14, ಕೆಸರಗೊಪ್ಪ 19, ಸೈದಾಪುರ 20, ಮದಭಾವಿ 22, ಢವಳೇಶ್ವರ 19, ನಂದಗಾಂವ 7 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಬೀಳಗಿ ತಾಲೂಕಿನಲ್ಲಿ ಅನಗವಾಡಿ ಗ್ರಾಪಂಗೆ 16 ಸ್ಥಾನ, ಅರಕೇರಿ 15, ಬಾಡಗಿ 15, ಚಿಕ್ಕಾಲಗುಂಡಿ 14, ಗಲಗಲಿ 21, ಗಿರಿಸಾಗರ 19, ಹೆರಕಲ್ಲ 13, ಹೊನ್ನಿಹಾಳ 17, ಇನಾಂಹಂಚಿನಾಳ 7, ಕಂದಗಲ್ಲ 8, ಕೋಲೂರ 21, ಕುಂದರಗಿ 13, ಕಾತರಕಿ 17, ಸಿದ್ದಾಪುರ 14, ಸೊನ್ನ 12, ಸುನಗ 24, ಯಡಹಳ್ಳಿ 18, ತೆಗ್ಗಿ 24, ಹೊಸಕೊರ್ತಿ 17, ಹೆಗ್ಗೂರ 12, ಬಾಡಗಂಡಿ 18, ನಾಗರಾಳ 15, ಬೂದಿಹಾಳ ಎಸ್‌ಎಚ್ 14 ಹಾಗೂ ಜಾನಮಟ್ಟಿ ಗ್ರಾಪಂನ 11 ಸ್ಥಾನಗಳು ಸೇರಿದಂತೆ ಒಟ್ಟು 24 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
EndFragment