ಕೋಟೆನಗರಿಯಲ್ಲಿ ಭವ್ಯ ಮೆರವಣಿಗೆ

BKT NEWS 20-1
Published on

ಬಾಗಲಕೋಟೆ: ನಗರದ ಟೀಕಿನಮಠದಲ್ಲಿ ಹಮ್ಮಿಕೊಂಡಿದ್ದ ಲಿಂ. ಹಾನಗಲ್ ಕುಮಾರ ಸ್ವಾಮಿಗಳ 152ನೇ ಜಯಂತ್ಯುತ್ಸವ, ಲಿಂ.ಮಲ್ಲಿಕಾರ್ಜುನ ಸ್ವಾಮಿಗಳ 19ನೇ ಮತ್ತು ರೇವಣಸಿದ್ಧ ಸ್ವಾಮೀಜಿ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತ ಭವ್ಯ ಮೆರವಣಿಗೆ ಭಾನುವಾರ ಜರುಗಿತು.

ಬೆಳಗ್ಗೆ ರುದ್ರಾಭಿಷೇಕ,ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಸುಮಂಗಲೆಯರ ಕುಂಭಮೇಳದೊಂದಿಗೆ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಶ್ರೀಗಳ ಪರ ಜೈಘೋಷಗಳು, ಡೊಳ್ಳು ವಾದ್ಯಗಳು ಕಳೆ ತಂದವು.

ಬಸವರಾಜ ಮುಕ್ಕುಪ್ಪಿ, ಶರಣಪ್ಪ ಸೂಳಿಗಾವಿ, ಶರಣಪ್ಪ ಕೆರೂರ, ಈರಣ್ಣ ಅಳ್ಳಿಮಟ್ಟಿ, ಮಲ್ಲು ರೋಣದ, ಈರಪ್ಪ ಹೂಲಗೇರಿ, ಬಸವರಾಜ ತಡಲಗಿ ಅಪಾರ ಸಂಖ್ಯೆಯ ಭಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net