

ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದಲ್ಲಿ ಕರೊನಾ ಶಂಕಿತ 30 ವರ್ಷ ವಯಸ್ಸಿನ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕುಟುಂಬದವರು ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯ ಸಂಸ್ಕಾರ ನಡೆಸಿದರು.
ಹೈ ಶುಗರ್‌ನಿಂದ ಮಹಿಳೆ ಬಳಲುತ್ತಿದ್ದರು, ಇನ್ನೂ ಮೃತಳ ಕರೊನಾ ವರದಿ ಬರುವುದು ಬಾಕಿ ಇದೆ. ಆದರೂ ಕರೊನಾ ಶಂಕೆ ವ್ಯಕ್ತವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್ ಧರಿಸಿ ಹೆಗಲ ಮೇಲೆ ಶವ ಹೊತ್ತುಕೊಂಡು ಸಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.