ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

BKT 23-3
Published on

ಬಾಗಲಕೋಟೆ: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಮೂರು ಮಸೂದೆಗಳ ರೈತರ ವಿರೋಧಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಕರಾಳ ದಿನ ಆಚರಿಸಿ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ವೀಣಾ ಕಾಶಪ್ಪನರ ಮಾತನಾಡಿ, ಕೇಂದ್ರ ಸರ್ಕಾರ ಕೃಷಿಕರ ವಿರೋಧಿ ಕಾನೂನು ಜಾರಿಗೊಳಿಸುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಎಲ್ಲ ಕಾನೂನು ಅವೈಜ್ಞಾನಿಕವಾಗಿವೆ. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಸಂಸತ್‌ನಲ್ಲಿ ರೈತರ ಪರವಾಗಿ ಧ್ವನಿ ಎತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಕೂಡಾ ಮಾಡುತ್ತಿಲ್ಲ. ರಾಜ್ಯದ 28 ಸಂಸದರು ನಿದ್ರೆಯಲ್ಲಿದ್ದಾರೆ. ಉಳುವವನೆ ಒಡೆಯ ಅಂತ ಕಾಂಗ್ರೆಸ್ ಪಕ್ಷದ ಜಾರಿಗೊಳಿಸಿ ಬಡ, ಹಿಂದುಳಿದ ವರ್ಗಗಳ ಜನರಿಗೆ ಭೂ ಒಡೆಯರನ್ನಾಗಿ ಮಾಡಿತು. ಆದರೇ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳನ್ನು ಇನ್ನಷ್ಟು ಶ್ರೀಮಂತ ಮಾಡಲು ಹೊರಟಿದೆ. ಕೇಂದ್ರ ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ದಿನಾಚರಣೆ ದಿನ ಸಂಭ್ರಮಿಸಬೇಕಾದ ರೈತರು ಕೇಂದ್ರ ಸರ್ಕಾರದ ನೀತಿಯಿಂದ ಕರಾಳ ದಿನಾಚರಣೆ ಆಚರಿಸುವಂತಾಗಿದೆ. ದೆಹಲಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಜಾನುವಾರುಗಳ ಸಮೇತ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಸ್ವಾರ್ಥ ಸಾಧನೆ ಈಡೇರಿಸಿಕೊಳ್ಳಲು ಮುಂದಾಗಿದೆ. ರೈತ, ಕಾರ್ಮಿಕರ ಶವಗಳ ಮೇಲೆ ಸೌಧವನ್ನು ನಿರ್ಮಿಸಲು ಹೊರಟಿದೆ. ಹೀಗಾಗಿ ಕಾಂಗ್ರೆಸ್ ರೈತರ ಪರವಾಗಿ ಹೋರಾಟ ನಡೆಸುತ್ತಿದೆ ಎಂದ ಅವರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

StartFragment

ಜಾನುವಾರುಗಳ ಸಮೇತ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಸ್ವಾರ್ಥ ಸಾಧನೆ ಈಡೇರಿಸಿಕೊಳ್ಳಲು ಮುಂದಾಗಿದೆ. ರೈತ, ಕಾರ್ಮಿಕರ ಶವಗಳ ಮೇಲೆ ಸೌಧವನ್ನು ನಿರ್ಮಿಸಲು ಹೊರಟಿದೆ. ಹೀಗಾಗಿ ಕಾಂಗ್ರೆಸ್ ರೈತರ ಪರವಾಗಿ ಹೋರಾಟ ನಡೆಸುತ್ತಿದೆ ಎಂದ ಅವರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಪ್ರಧಾನ ಮಂತ್ರಿ ನರೇಂದ್ರ ಅವರಿಗೆ ಕೃಷಿ ಬಗ್ಗೆ ಕಾಳಜಿ ಇಲ್ಲ. ತಮಗೆ ತಿಳಿದಂತೆ ಕಾನೂನು ರೂಪಿಸುತ್ತಿದ್ದಾರೆ. ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅವರಿಗೆ ಗೊತ್ತಿಲ್ಲ. ದೆಹಲಿ ಮಾದರಿಯಲ್ಲಿ ಜಿಲ್ಲೆಯಲ್ಲಿ ರೈತರು ಉಗ್ರವಾದ ಹೋರಾಟಕ್ಕೆ ಇಳಿಯಬೇಕು. ರೈತರ ಪರವಾದ ಹೋರಾಟಕ್ಕೆ ಪಕ್ಷ ನೋಡುವದಿಲ್ಲ. ಯಾವುದೇ ಪಕ್ಷ ಇರಲಿ. ರೈತರ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದು ಹೇಳಿದರು.

ಮುಖಂಡರಾದ ಸಂತೋಷ ಬಗಲಿದೇಸಾಯಿ, ಎಂ.ಡಿ.ಯಲಿಗಾರ, ಚನ್ನವೀರ ಅಂಗಡಿ, ಹನುಮಂತ ರಾಕುಂಪಿ, ಹಾಜಿಸಾಬ ದಂಡಿನ, ಮಂಜುನಾಥ ಪುರಥಗೇರಿ, ಚಂದ್ರಶೇಖರ ರಾಠೋಡ, ರೇಣುಕಾ ನ್ಯಾಮಗೌಡ, ಮಂಜುಳಾ ಭೂಸಾರೆ ಸೇರಿದಂತೆ ಇತರರು ಇದ್ದರು.

ರೈತ ದೇಶದ ಬೆನ್ನೆಲಬು ಅಂತ ಭಾಷಣ ಮಾಡಿದರೇ ಸಾಲದು. ವಾಸ್ತವದಲ್ಲಿ ರೈತರ ಪರವಾಗಿ ಕಾನೂನು, ಕಾರ್ಯಕ್ರಮ ರೂಪಿಸಬೇಕು. ಆದರೇ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನು ರೂಪಿಸುತ್ತಿದೆ. ದೇಶವ್ಯಾಪಿ ಇದನ್ನು ಖಂಡಿಸಿ ಕಾಂಗ್ರೆಸ್ ಹೋರಾಟ ಕೈಗೊಂಡಿದೆ. ಬಿಜೆಪಿ ಸರ್ಕಾರ ಕಾನೂನು ವಾಪಸ್ಸ ಪಡೆಯುವ ವರೆಗೆ ನಿರಂತರವಾಗಿ ಚಳುವಳಿ ನಡೆಸಲಾಗುವುದು.
- ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net