ರೈತರ ಹೊಲದಲ್ಲೇ ಕೃಷಿ ಮಾಹಿತಿ

BKT 172
Published on

ಬಾಗಲಕೋಟೆ: ಜಿಲ್ಲೆಯ ರೈತರ ಅನುಕೂಲಕ್ಕಾಗಿ ಅವರ ಹೊಲದಲ್ಲಿಯೇ ಸಲಹೆ-ಸೂಚನೆ, ಮಾರ್ಗದರ್ಶನ ಹಾಗೂ ತಾಂತ್ರಿಕತೆ ವರ್ಗಾವಣೆಯ ನೀಡುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ವಿನೂತನವಾಗಿ ಸಂಚಾರಿ ಸಸ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಸಂಚಾರಿ ಸಸ್ಯ ಚಿಕಿತ್ಸಾಲಯ ವಾಹನದ ಜತೆಗೆ ಡಿಪ್ಲೊಮಾ ಪದವಿ ಹೊಂದಿದ ಕೃಷಿ ತಜ್ಞರು ಮತ್ತು ವಿಶೇಷ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ವಿಷಯ ತಜ್ಞರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಈ ವಾಹನವು ಈಗಾಗಲೇ ರೈತರ ಜಮೀನುಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದು, ಪ್ರತಿ ದಿನ ಒಂದು ತಾಲೂಕಿಗೆ ಈ ವಾಹನ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಯೋಗಾಲಯದಿಂದ ರೈತರ ಹೊಲದವರೆಗೆ (ಲ್ಯಾಬ್ ಟು ಲ್ಯಾಂಡ್) ಆಗಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ಈ ವಾಹನವು ಜಿಪಿಎಸ್ ವ್ಯವಸ್ಥೆ ಹೊಂದಿರಲಿದೆ. ಈ ಮೂಲಕ ರೈತರು ತಮ್ಮ ಹೊಲದಲ್ಲಿ ಬಂದಿರುವ ರೋಗ ಹಾಗೂ ಕೀಟ ಬಾಧೆಯ ಸಮಸ್ಯೆ ಹಾಗೂ ಮಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ 155313 ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಬೇಕು. ಈ ಆಧಾರದ ಮೇಲೆ ಕೃಷಿ ಸಂಜೀವಿನಿ ವಾಹನವು ಆ ಭಾಗದಲ್ಲಿ ಸಂಚರಿಸಿ ಅವಶ್ಯವುಳ್ಳ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ತಾಂತ್ರಿಕ ಮಾಹಿತಿ ಒದಗಿಸಲಿದೆ ಎಂದು ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net