ಮನೆ, ಬಡಾವಣೆ ಆವರಣದಲ್ಲಿ ಸಸಿ ಬೆಳೆಸಿ

BKT NEWS 28-1
Published on

ಬಾಗಲಕೋಟೆ: ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡಬೇಕು. ಹಸಿರು ಉಳಿಸುವ ಕೆಲಸವಾಗಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಇಲ್ಲಿನ ನವನಗರದ ಸೆಕ್ಟರ್ ನಂಬರ್ 46 ರಲ್ಲಿ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗತಿಕತೆ ಬೆಳೆದಂತೆ ಪರಿಸರ ವಿನಾಶದತ್ತ ಸಾಗುತ್ತಿದೆ. ವನ್ಯ ಜೀವಿಗಳು ಕಣ್ಮರೆಯಾಗುತ್ತಿವೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆ, ಬಡಾವಣೆ ಆವರಣದಲ್ಲಿ ಗಿಡ, ಮರಗಳನ್ನು ಬೆಳೆಸಬೇಕು ಎಂದರು.

ಮುಖಂಡರಾದ ರಾಜು ರೇವಣಕರ, ಬಸವರಾಜ ಅವರಾದಿ, ಅಂಬಾಜಿ ಜೋಶಿ, ಯಲ್ಲಪ್ಪ ನಾರಾಯಣಿ, ಅರಣ್ಯ ಇಲಾಖೆ ಅಧಿಕಾರಿಗಳಾದ ಎ.ಎಸ್.ನೇಗಿನಾಳ, ರೂಪ ವಿ.ಕೆ., ರಾಜೇಶ ಬಿ., ಸಿ.ಬಿ.ಸಿದ್ದಲಿಂಗಪ್ಪನವರ, ಆರ್.ವಿ.ಮಠದ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net