ಕಳಪೆ ಕಾಮಗಾರಿ ಸಹಿಸಲ್ಲ

Veeranna Chiranti Matt 18 May 20
Published on

ಬಾಗಲಕೋಟೆ: ನಗರದ ವಾರ್ಡ್ ನಂಬರ್ 31 ವ್ಯಾಪ್ತಿಯ ನವನಗರದ ಸೆಕ್ಟರ್ ನಂಬರ್ 57 ಮತ್ತು 58ರ ರಸ್ತೆ ಡಾಂಬರೀಕರಣ ಹಾಗೂ ಗಾರ್ಡನ್ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕ, ಬಿಟಿಡಿಎ ಅಧ್ಯಕ್ಷ ಡಾ.ವೀರಣ್ಣ ಚರಂತಮಠ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 1 ಕೋಟಿ 26 ಲಕ್ಷ ರೂ.ಮೊತ್ತದಲ್ಲಿ 57 ಮತ್ತು 58ರಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿವೆ. ನವನಗರದಲ್ಲಿ ಕೆಲವೊಂದು ಕಡೆ ರಸ್ತೆಗಳು ದುರಸ್ತಿಗೆ ಬಂದಿವೆ. ಅವೆಲ್ಲವನ್ನು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು, ನವನಗರ ಹಾಗೂ ಹಳೆ ಬಾಗಲಕೋಟೆಯಲ್ಲಿರುವ ಎಲ್ಲ ರಸ್ತೆಗಳನ್ನು ಶೀಘ್ರದಲ್ಲೇ ದುರಸ್ತಿಗೊಳಿಸಲಾಗುವುದು ಎಂದು ಹೇಳಿದರು.

ನವನಗರದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ, ಗಾರ್ಡನ್ ಅಭಿವೃದ್ಧಿ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಥರ್ಡ್ ಪಾರ್ಟಿ ವರದಿ ನಂತರ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್ ಪಾಟೀಲ, ಬಿಟಿಡಿಎ ಸದಸ್ಯರಾದ ಮೋಹನ್ ನಾಡಗೌಡ, ಕುಮಾರ ಯಳ್ಳಿಗುತ್ತಿ, ನಗರಸಭೆ ಸದಸ್ಯೆ ಸವಿತಾ ಲೆಂಕೆನ್ನವರ್, ಮುಖಂಡರಾದ ರಾಜು ರೇವಣಕರ, ಅಣ್ಣಪ್ಪ ಲೆಂಕೆನ್ನವರ್, ರಾಮಣ್ಣ ಜುಮನಾಳ, ವಿಜಯಲಕ್ಷ್ಮಿ ಆಚಾರ್ಯ, ಮಂಜುಳಾ ಮಿಸ್ಕಿನ್ ಸೇರಿದಂತೆ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net