ಕೊಟ್ಪಾ ದಾಳಿ 30 ಪ್ರಕರಣ ದಾಖಲೆ

iStock-1133345196-750x422
Published on

ಬಾಗಲಕೋಟೆ: ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಹಳೇ ಬಾಗಲಕೋಟೆ ಮತ್ತು ನವನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಬಾಗಲಕೋಟೆ ನವನಗರ ಪೊಲೀಸ್ ಠಾಣೆ ವತಿಯಿಂದ ಕೋಟ್ಪಾ-2003ರ ಕಾಯಿದೆಯ ಅಡಿಯಲ್ಲಿ ಈಚೆಗೆ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್ 4 ಹಾಗೂ 6 ರಲ್ಲಿ ಒಟ್ಟು 30 ಪ್ರಕರಣಗಳನ್ನು ದಾಖಲಿಸುವ ಮೂಲಕ ಒಟ್ಟು 3350 ರೂ.ಗಳ ದಂಡವನ್ನು ವಿಧಿಸಿ ನಿಯಮಬಾಹಿರವಾಗಿ ಅಳವಡಿಸಿದ ಜಾಹೀರಾತು ಲಕಗಳನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಠಳ್ಳಿ, ಶಿವಲಿಂಗ ಕರಗಣ್ಣಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಎನ್.ಡಿ ನಿಲನಾಯಕ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷ ಎಸ್.ಎಸ್ ಚವಡಿ ಇದ್ದರು.

StartFragment

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net