ಸರ್ಕಾರ ಯೋಜನೆ ಸರ್ಮಪಕವಾಗಿ ತಲುಪಿಸಿ

BKT 161
Published on

ಬಾಗಲಕೋಟೆ: ಪ್ರಸಕ್ತ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿ ವಿವಿಧ ಇಲಾಖೆಗಳು ಶೇ.100 ರಷ್ಟು ಪ್ರಗತಿ ಸಾಧಿಸಿದ್ದು ಉತ್ತಮ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್‌ಸಿಪಿ, ಟಿ.ಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೇಷ್ಮೆ, ಸಹಕಾರ, ಸಣ್ಣ ನೀರಾವರಿ, ಅರಣ್ಯ, ಮೀನುಗಾರಿಕೆ, ಆಯುಷ, ಕೈಮಗ್ಗ ಮತ್ತು ಜವಳಿ ಇಲಾಖೆಗಳು ಶೇ.100 ರಷ್ಟು ಸಾಧನೆ ಮಾಡಿದರೆ, ಆಹಾರ ಇಲಾಖೆ ಶೇ.99.98 ರಷ್ಟು, ಕೃಷಿ ಶೇ.91, ಲೋಕೋಪಯೋಗಿ ಶೇ.96 ರಷ್ಟು ಪ್ರಗತಿ ಸಾಧಿಸಿವೆ. ಈ ತಿಂಗಳ ಅಂತ್ಯದೊಳಗೆ ಇತರೆ ಇಲಾಖೆಯವರು ಶೇ.100ಕ್ಕೆ ತಲುಪುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕಳೆದ ಸಭೆಯಲ್ಲಿ ಅನುಸರಣಾ ವರದಿಯ ಬಗ್ಗೆ ಮಾಹಿತಿ ಪಡೆದ ಡಿಸಿ ರಾಜೇಂದ್ರ, ಜನವರಿ ಮತ್ತು ೆಬ್ರವರಿ ಮಾಹೆಯ ಪ್ರಗತಿ ವರದಿಯ ತುಲನಾತ್ಮಕವಾಗಿ ಚರ್ಚೆ ನಡೆಸಿದಾಗ ಇಲಾಖೆವಾರು ಹೆಚ್ಚಿನ ಪ್ರಗತಿಯಾಗಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇದೇ ರೀತಿ ಮುಂದಿನ ಸಾಲಿನಲ್ಲಿಯೂ ಸರ್ಕಾರದ ವಿವಿಧ ಯೋಜನೆಗಳು ಲಾನುಭವಿಗಳಿಗೆ ತಲುಪಿಸುವ, ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಂಪೂರ್ಣವಾಗಿ ವ್ಯಯ ಮಾಡುವ ಕೆಲಸವಾಗಬೇಕು ಎಂದು ತಿಳಿಸಿದರು.

ಅಂಬೇಡ್ಕರ, ಆದಿಜಂಬವ, ತಾಂಡಾ, ಭೋವಿ ಅಭಿವೃದ್ದಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧ್ದಿ ನಿಗಮಗಳು ವಿವಿಧ ಯೋಜನೆಗಳಡಿ ಸ್ವೀಕೃವಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯಧನ ವಿತರಿಸುವಂತೆ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಡಿಸಿ ನಿರ್ದೇಶನದ ಮೇರೆಗೆ ಮಾರ್ಚ ಮಾಹೆಯಲ್ಲಿ ಪ್ರತಿ ತಾಲೂಕಾ ಮಟ್ಟದಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಸಭೆ ಜರುಗಿಸಲಾಗಿದೆ. ನಗರಾಭಿವೃದ್ಧ್ದಿ ಇಲಾಖೆಯವರು ೆಬ್ರವರಿ ಮಾಹೆಯ ಪ್ರಗತಿ ವರದಿಯನ್ನು ಸಲ್ಲಿಸಿರುವದಿಲ್ಲ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ ರಾಜೇಂದ್ರ, ಮಾಹಿತಿ ನೀಡದ ಇಲಾಖೆಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‌ಕುಮಾರ ಬಾವಿದಡ್ಡಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ನಗರಾಭಿವೃದ್ಧ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರಶಾಂತ ಗಿಡದಾನಪ್ಪಕೋಳ, ಡಿವೈಪಿಸಿಯ ಜಾಸ್ಮೀನ್ ಕಿಲ್ಲೇದಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಮನೆ ಇಲ್ಲದ ಪೌರ ಕಾರ್ಮಿಕರಿಗೆ ಶೇ.100 ರಷ್ಟು ಸೂರು ಒದಗಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿರುವ 15 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪೌರ ಕಾರ್ಮಿಕರ ಪಟ್ಟಿ ಮಾಡಿ ಈಗಾಗಲೇ ಮನೆ ಇರುವವರನ್ನು ಬಿಟ್ಟು ಉಳಿದವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಒತ್ತು ನೀಡಬೇಕು. ಜಾಗವಿದ್ದು, ಮನೆ ಇಲ್ಲದವರು ಹಾಗೂ ಜಾಗ ಮತ್ತು ಮನೆ ಎರಡು ಇಲ್ಲದವರ ಪಟ್ಟಿ ಮಾಡಿಕೊಂಡು ವರ್ಷದಲ್ಲಿ ಎಲ್ಲರೂ ಮನೆ ಕಟ್ಟಿಕೊಂಡಿರಬೇಕು. ಈ ಕಾರ್ಯದಲ್ಲಿ ಪೌರಕಾರ್ಮಿಕರು ಸ್ವಯಂ ಪ್ರೇರಿತವಾಗಿ ಬಂದು ಯೋಜನೆಯ ಲಾಭ ಪಡೆದುಕೊಳ್ಳಬೇಕು.
-ಕೆ.ರಾಜೇಂದ್ರ ಜಿಲ್ಲಾಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net