ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಘೋಷಣೆ

BKT 13-2
Published on

ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿದೇರ್ರ್ಶಕ ಮಂಡಳಿಯ ಚುನಾವಣೆ ನಿಗದಿಯಾಗುತ್ತಿದ್ದು, ಚುನಾವಣೆ ಕಾವು ಜೋರಾಗಿ ಪಡೆದುಕೊಂಡಿದ್ದು, ಭಾರತೀಯ ಜನತಾ ಪಕ್ಷವು ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.

ನೇಕಾರ ಸಹಕಾರಿ ಸಂಘದದಿಂದ ಮಲ್ಲಿಕಾರ್ಜುನ ಬಣಕಾರ, ಕುರಿ ಹಾಗೂ ಹುಣ್ಣಿ ಸಹಕಾರಿ ಸಂಘದಿಂದ ಸದಾಶಿವ ಇಟಕನ್ನವರ, ಇತರೆ ಸಹಕಾರಿ ಸಂಘದಿಂದ ಹನಮಂತ ನಿರಾಣಿ, ಪತ್ತಿನ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಂದ ಪ್ರಕಾಶ ತಪಶೆಟ್ಟಿ ಅವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ. ಈ ನಾಲ್ಕು ಜನರನ್ನು ಇತ್ತೀಚಿಗೆ ಬಾದಾಮಿಯಲ್ಲಿ ನಡೆದ ಜಿಲ್ಲಾ ಕೋರಕಮೀಟಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಟಿ.ಪಾಟೀಲ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net