

ಬಾಗಲಕೋಟೆ: ಜನನ-ಮರಣಗಳ ಮುಖ್ಯ ನೊಂದಣಾಧಿಕಾರಿಗಳು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬೆಂಗಳೂರು ವತಿಯಿಂದ ನೊಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳಿಗೆ ಹಮ್ಮಿಕೊಂಡ ಇ-ಜನ್ಮ ತಂತ್ರಾಂಶ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಬುಧವಾರ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನನ ಮರಣ ನೋಂದಣಿ ಪ್ರಕ್ರಿಯೆ ಪ್ರತಿಯೊಬ್ಬ ವ್ಯಕ್ತಿಯ ಮಹತ್ವದ ದಾಖಲೆಗಳಾಗಿದ್ದು. ನೋಂದನಾಧಿಕಾರಿಗಳು ಸಾಕಷ್ಟು ಜಾಗೃತೆಯಿಂದ ನೋಂದಣಿ ಮಾಡಬೇಕು. ಆಶೆ-ಆಮಿಷಗಳಿಗೆ ಬಲಿಯಾಗಿ ಕಾನೂನು ಬಾಹಿರ ಕೃತ್ಯವನ್ನು ಎಸಗಬಾರದು ಎಂದು ತಿಳಿಸಿದರು.
ಜನನ ಮರಣ ನೋಂದಣಿ ವ್ಯವಸ್ಥೆಯನ್ನು ಆಯಾ ಪ್ರದೇಶದ ಜನಸಂಖ್ಯೆ ಅಂದಾಜಿಸಲು, ಆರೋಗ್ಯ ವ್ಯವಸ್ಥೆ ಸುಧಾರಿಸಲು, ಯೋಜನೆ ರೂಪಿಸಲು, ತಾಯಿ ಮಗುವಿನ ಆರೋಗ್ಯ ಸುರಕ್ಷಾ ಕ್ರಮಗಳನ್ನು ರೂಪಿಸಲು, ಹೆಣ್ಣು ಭ್ರೂಣ ಹತ್ಯೆ, ಶಿಶು ಮರಣ ಪ್ರಮಾಣ ಅಂದಾಜಿಸಲು ಮುಂತಾದ ಹಲವಾರು ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದರು.
ಜನನ ಮರಣ ನೋಂದಣಿ ವ್ಯವಸ್ಥೆಯನ್ನು ಆಯಾ ಪ್ರದೇಶದ ಜನಸಂಖ್ಯೆ ಅಂದಾಜಿಸಲು, ಆರೋಗ್ಯ ವ್ಯವಸ್ಥೆ ಸುಧಾರಿಸಲು ಯೋಜನೆ ರೂಪಿಸಲು, ತಾಯಿ ಮಗುವಿನ ಆರೋಗ್ಯ ಸುರಕ್ಷಾ ಕ್ರಮಗಳನ್ನು ರೂಪಿಸಲು, ಹೆಣ್ಣು ಭ್ರೂಣ ಹತ್ಯೆ, ಶಿಶು ಮರಣ ಪ್ರಮಾಣ ಅಂದಾಜಿಸಲು ಮುಂತಾದ ಹಲವಾರು ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಜನನ ದಾಖಲೆಗಳನ್ನು ಶಿಕ್ಷಣ, ಉದ್ಯೋಗ, ವಾಹನ ಚಾಲನೆ ಪರವಾನಗಿ, ಪಾಸ್ ಪೋರ್ಟ್ ಪಡೆಯಲು ಅವಶ್ಯಕವಿದ್ದು, ಮರಣ ದಾಖಲೆಗಳು ವಾರಸಾ ಪ್ರಮಾಣ ಪತ್ರ, ಆಸ್ತಿ ವರ್ಗಾವಣೆ, ವಿಮೆ ಹಾಗೂ ಮತ್ತಿತರ ಹಣಕಾಸು ವ್ಯವಹಾರಗಳನ್ನು ಇತ್ಯರ್ಥಪಡಿಸಲು ಬಳಸಲಾಗುತ್ತದೆ. ಇಂತಹ ಮಹತ್ವ ಹೊಂದಿರುವ ಜನನ ಮರಣ ನೋಂದಣಿ ಕಾರ್ಯವನ್ನು ಶ್ರದ್ಧೆ, ನಿಷ್ಟೆ, ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶ್ರೀಯುತ ಗಂಗಾಧರ್ ದಿವಟರ ಜನನ-ಮರಣ ನೋಂದಣಾಧಿಕಾರಿಗಳು ಮತ್ತು ಉಪ-ನೋಂದಣಾಧಿಕಾರಿ ಗಳಿಗೆ ಇ-ಜನ್ಮ ತಂತ್ರಾಂಶ ಮತ್ತು ಜನನ-ಮರಣಗಳ ನೋಂದಣಿ ಅನಿಯಮ 1969ರ ಬಗ್ಗೆ ತರಬೇತಿ ನೀಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಾರ್ಯಾಲಯದ ಸಹಾಯಕ ನಿರ್ದೇಶಕರಾದ ಎಂ.ಆರ್.ಬಾಡಗಿ ಹಾಗೂ ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
EndFragment