

ಬಾಗಲಕೋಟೆ: ಹೆಣ್ಣು ಸ್ವತಂತ್ರಗೊಳ್ಳದ ಹೊರತು ಗುಲಾಮಗಿರಿ ನಾಶವಾಗುವುದಿಲ್ಲ. ಎಲ್ಲ ಗಂಡಸಿನ ಸಂವೇದನೆಯಲ್ಲಿ ಸೀಪರತೆ ಹುಟ್ಟಬೇಕಿದೆ. ಕಾಲ ಬದಲಾದರೂ ಹೆಣ್ಣಿನ ಶೋಷಣೆಯ ರೂಪ ಬದಲಾಗಿದೆ ಹೊರತು ಶೋಷಣೆ ನಿಂತಿಲ್ಲ ಎಂದು ಧಾರವಾಡದ ಲೇಖಕಿ ಡಾ.ವಿನಯಾ ಒಕ್ಕುಂದ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿದ್ಯಾರ್ಥಿನಿಯರ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ತತ್ವದ ಹಾಗೆ ಹೆಣ್ಣು ಹೋರಾಟದಲ್ಲಿ ಬದುಕಬೇಕು. ಸೀವಾದಿ ಚಿಂತನೆ ಇಂದು ಹೆಣ್ಣನ್ನು ಬಳಕೆಯ ಪದಾರ್ಥವಾಗಿಸಿದೆ. ಬಂಡವಾಳಶಾಹಿ ತನ್ನ ಪ್ರಚಾರ ಹೆಚ್ಚಿಸಿಕೊಳ್ಳಲು ಇಂದು ಮಹಿಳೆಯನ್ನು ಬಳಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದಲ್ಲಿ ಇಂದು ಭ್ರೂಣಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಬಂಡವಾಳ, ಕೋಮುವಾದ ಇವು ಹೆಣ್ಣಿನ ಸ್ವತಂತ್ರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಹೆಣ್ಣಿನ ಧೋರಣೆ ಬದಲಾಗಬೇಕಾದರೆ ಬೌದ್ಧಿಕತೆ, ಸೃಜನಾತ್ಮಕತೆ ಬೆಳೆಸಿಕೊಂಡು ಹೊಸ ದಾರಿ, ಹೊಸ ಬೆಳಕನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯೆ ಎಸ್.ಜೆ. ಒಡೆಯರ ಮಾತನಾಡಿ, ಸಮಾಜ, ದೇಶ, ಜಗತ್ತು ಸುಂದರವಾಗಿರಲು ಮಹಿಳೆಯರ ಪಾತ್ರ ದೊಡ್ಡದು. ಇಂದು ದೇಶದ ಎಲ್ಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ವಿಶೇಷವಾಗಿದೆ. ನವ ಸಮಾಜ ನಿರ್ಮಾಣ ಮಾಡಲು ಮಹಿಳೆಯರು ತಮ್ಮದೆ ಆದ ಹಕ್ಕು ಬಲವಾಗಿ ಬೆಳೆಸಿಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಐಕ್ಯೂಎಸಿ ಸಂಯೋಜಕ ಪಿ.ಕೆ.ಚೌಗಲಾ, ಡಾ.ಜಿ.ಐ. ನಂದಿಕೋಲಮಠ, ವಿಚಾರ ಸಂಕಿರಣ ಸಂಘಟನಾ ಕಾರ್ಯದರ್ಶಿ ಆರ್.ಐ.ಗೌಡರ ಡಾ.ಶಶಿಕಲಾ ಮೊರಬದ, ಡಾ.ಟಿ.ಎಂ. ನಾಗರತ್ನ, ಡಾ.ವೀಣಾ ಕಲ್ಮಠ, ಜಯಶ್ರೀ ಗದ್ದಿ, ಎ.ಬಿ. ಕೊಣ್ಣುರ, ಡಾ.ಪಿ.ಎಸ್. ಹುಯಿಲಗೋಳ ಉಪಸ್ಥಿತರಿದ್ದರು. ಕಾವ್ಯಾ ಹಾಗೂ ಕವಿತಾ ಪ್ರಾರ್ಥಿಸಿದರು. ಕೆ.ವಿ. ಜುಕ್ತಿಮಠ ವಂದಿಸಿದರು. ಎಸ್. ಎಂ. ಚಾವೂಸ ನಿರೂಪಿಸಿದರು.
ಪ್ರಬಂಧ ಮಂಡನೆ
ಮಹಿಳೆ ಮತ್ತು ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಹೊಸಪೇಟೆ, ಕೊಪ್ಪಳ, ವಿಜಯಪುರ, ಜಮಖಂಡಿ, ಗುಳೇದಗುಡ್ಡ, ಇಳಕಲ್ಲ ವಿವಿಧ ಭಾಗದ ಮಹಾವಿದ್ಯಾಲಯಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಬಂಧ ಮಂಡಿಸಿದರು.
EndFragment