ಡಿಸಿಎಂ ಕಾರಜೋಳರಿಂದ ಮುಧೋಳ ತಾಲೂಕಿನ ಐದು ಪ್ರೌಢಶಾಲೆ ದತ್ತು

Govind Karajol
Published on

ಬಾಗಲಕೋಟೆ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಾವು ಪ್ರತಿನಿಧಿಸುವ ಮುಧೋಳ ಕ್ಷೇತ್ರದ ಐದು ಸರ್ಕಾರಿ ಪ್ರೌಢ ಶಾಲೆಗಳನ್ನು ದತ್ತು ಪಡೆದಿದ್ದು, ಸರ್ಕಾರದಿಂದ ಮಂಗಳವಾರ ದತ್ತು ಸ್ವೀಕಾರ ಪತ್ರವನ್ನು ಸ್ವೀಕರಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯವನ್ನು ಕಲ್ಪಿಸುವ ಹಾಗೂ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸಚಿವರು, ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಶಾಲೆ ದತ್ತು ತೆಗೆದುಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಿದ್ದ ಹಿನ್ನೆಲೆ ಬೆಂಗಳೂರಿನ ವಿಧಾನಸೌಧ ಬ್ಯಾಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತು ಸ್ವೀಕಾರ ಪತ್ರವನ್ನು ಕಾರಜೋಳ ಪಡೆದುಕೊಂಡರು.

ಮುಧೋಳ ಕ್ಷೇತ್ರದ ಶಿರೋಳ, ಬೆಳಗಲಿ, ನಾಗರಾಳ, ಇಂಗಳಗಿ, ಮುಗಳಖೋಡ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳನ್ನು ಕಾರಜೋಳ ಅವರು ದತ್ತು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವುದರೊಂದಿಗೆ ಶಿಕ್ಷಕರೊಂದಿಗೆ ಚರ್ಚೆ, ಪಾಲಕರಲ್ಲಿ ಜಾಗೃತಿ ಮೂಡಿಸಿ, ಮಕ್ಕಳ ಕಲಿಕಾಮಟ್ಟವನ್ನು ಹೆಚ್ಚಿಸುವ ಸರ್ಕಾರದ ಉದ್ದೇಶಕ್ಕೆ ಗಣ್ಯರು ಶಾಲೆಗಳನ್ನು ದತ್ತು ಪಡೆದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net