ಸಾಧನಾ, ಲೋಹಿತ ವೇಗದ ಓಟಗಾರರು

BKT NEWS 02-3
Published on

ಬಾಗಲಕೋಟೆ: ತಾಂತ್ರಿಕ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಬಾಗಲಕೋಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ 43 ನೇ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಭಾನುವಾರ ಜರುಗಿದ ಕ್ರೀಡೆಗಳಲ್ಲಿ ಸಾಧನಾ, ಲೋಹಿತ ವೇಗದ ಓಟಗಾರರಾಗಿ ಹೊರಹೊಮ್ಮಿದ್ದಾರೆ.

ಫಲಿತಾಂಶದ ವಿವರ :
ಮಹಿಳೆಯರ ವಿಭಾಗ: 100ಮೀ ಓಟ: ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನಾ (ಪ್ರಥಮ), ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ತ್ರಿವೇಣಿ (ದ್ವಿತೀಯ) ಹಾಗೂ ನಿಟ್ಟೆಯ ಎನ್.ಆರ್.ಎ.ಎಂ. ಪಾಲಿಟೆಕ್ನಿಕ್ ಕಾಲೇಜಿನ ಶಿಲ್ಪಶ್ರೀ (ತೃತೀಯ). 400 ಮೀ: ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವೀಕ್ಷಿತಾ (ಪ್ರಥಮ), ಬೆಳಗಾವಿಯ ಗೋಮಟೇಶ ಪಾಲಿಟೆಕ್ನಿಕ್ ಕಾಲೇಜಿನ ಸ್ನೇಹಲ್ ಜಾಧವ (ದ್ವಿತೀಯ) ಹಾಗೂ ಮಂಗಳೂರಿನ ಸರ್ಕಾರಿ ಬಾಲಕಿಯರ ಪಾಲಿಟೆಕ್ನಿಕ್‌ದ ಭವ್ಯಶ್ರೀ ಕೆ.ಎಂ (ತೃತೀಯ).

800 ಮೀಟರ್ ಓಟ: ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಗಾಯತ್ರಿ (ಪ್ರಥಮ), ಬೆಳಗಾವಿಯ ಗೋಮಟೇಶ ಪಾಲಿಟೆಕ್ನಿಕ್‌ದ ಭಾರತಿ ಪಾಟೀಲ (ದ್ವಿತೀಯ) ಹಾಗೂ ಬಾಗಲಕೋಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುನೀತಾ ಕಂಕನೋಡಿ (ತೃತೀಯ). 4*100 ರಿಲೆ: ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್‌ನ ಖುಷಿ (ಪ್ರಥಮ), ಮಂಗಳೂರಿನ ಬಾಲಕಿಯರ ಸರ್ಕಾರಿ ಪಾಲಿಟೆಕ್ನಿಕ್‌ನ ಭವ್ಯಶ್ರೀ ಕೆ.ಎಂ (ದ್ವಿತೀಯ) ಹಾಗೂ ಕೆ.ವಿ. ಗೌಡ ಪಾಲಿಟೆಕ್ನಿಕ್‌ನ ಭವ್ಯಶ್ರೀ ಎಂ.ಎಸ್ (ತೃತೀಯ).

ಗುಂಡು ಎಸೆತ: ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್‌ನ ಸುಚಿತ್ರಾ (ಪ್ರಥಮ), ಭದ್ರಾವತಿಯ ಸರ್ಕಾರಿ ಪಾಲಿಟೆಕ್ನಿಕ್‌ನ ಮುಕಾಂಬಿಕೆ (ದ್ವಿತೀಯ) ಹಾಗೂ ನಿಟ್ಟೆಯ ಎನ್.ಆರ್.ಎ.ಎಂ. ಪಾಲಿಟೆಕ್ನಿಕ್‌ದ ವೈಷ್ಣವಿ ಆಚಾರ್ಯ (ತೃತೀಯ). ಜಾವಲಿನ್ ಥ್ರೋ: ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸೋನಾ.ಎಸ್ (ಪ್ರಥಮ), ನಿಟ್ಟೆಯ ಎನ್.ಆರ್.ಎ.ಎಂ. ಪಾಲಿಟೆಕ್ನಿಕ್‌ನ ವೈಷ್ಣವಿ ಆಚಾರ್ಯ (ದ್ವಿತೀಯ) ಹಾಗೂ ಬೆಂಗಳೂರಿನ ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್‌ನ ದಿವ್ಯಾ ಎಂ (ತತೀಯ) ಸ್ಥಾನ ಪಡೆದಿದ್ದಾರೆ.

ಎತ್ತರ ಜಿಗಿತ: ಮಂಗಳೂರಿನ ಬಾಲಕಿಯರ ಸರ್ಕಾರಿ ಪಾಲಿಟೆಕ್ನಿಕ್‌ನ ಜಯಶ್ರೀ (ಪ್ರಥಮ), ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ್ ತೇಜಾಕ್ಷಿ (ದ್ವಿತೀಯ) ಹಾಗೂ ದಾವಣಗೆರೆಯ ಡಿ.ಆರ್.ಆರ್ ಸರ್ಕಾರಿ ಪಾಲಿಟೆಕ್ನಿಕ್‌ನ ಸುಪ್ರೀಯಾ ಎಸ್.ಕೆ (ತೃತೀಯ) ಸ್ಥಾನ ಪಡೆದಿದ್ದಾರೆ. ಚೆಸ್: ಹೊಸಪೇಟೆ ಟಿಎಂಎಇ ಸೊಸೈಟಿ ಪಾಲಿಟೆಕ್ನಿಕ್‌ನ ಬಿ.ಚಿತ್ರಶ್ರೀ (ಪ್ರಥಮ), ಧಾರವಾಡದ ಕೆಎಚ್‌ಕೆ ಪಾಲಿಟೆಕ್ನಿಕ್‌ನ ಸ್ವಾತಿ ಎಸ್. (ದ್ವಿತೀಯ) ಹಾಗೂ ಬೆಂಗಳೂರಿನ ಎಸ್.ಜೆ ಪಾಲಿಟೆಕ್ನಿಕ್ ಕಾಲೇಜಿನ ರುಚಿತಾ ವಾಣಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪುರುಷರ ವಿಭಾಗ: 100 ಮೀ ಓಟ: ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಲೋಹಿತ (ಪ್ರಥಮ), ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್‌ನ ವಿಶ್ವನಾಥ (ದ್ವಿತೀಯ) ಹಾಗೂ ಮಣಿಪಾಲದ ಡಾ. ಟಿ.ಎಂ.ಡಿ.ಪೈ. ಪಾಲಿಟೆಕ್ನಿಕ್‌ನ ಚೇತನ (ತೃತೀಯ) ಸ್ಥಾನ ಪಡೆದಿದ್ದಾರೆ. 400 ಮೀಟರ್ ಓಟ: ಬೆಳಗಾವಿಯ ಎಂ.ಎಲ್. ಭರತೇಶ ಪಾಲಿಟೆಕ್ನಿಕ್‌ನ ಚೇತನ (ಪ್ರಥಮ), ಮಂಗಳೂರಿನ ಸರ್ಕಾರಿ ಪಾಲಿಟೆಕ್ನಿಕ್‌ನ ರೋಣಕ (ದ್ವಿತೀಯ) ಹಾಗೂ ಉಜಿರೆಯ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನ ರೋಹಿತ (ತೃತೀಯ). 1,500 ಮೀಟರ್: ಹೊಳೆನರಸಿಪುರದ ಸರ್ಕಾರಿ ಪಾಲಿಟೆಕ್ನಿಕ್‌ನ ಮಂಜುನಾಥ.ಕೆ (ಪ್ರಥಮ), ಉಜಿರೆಯ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನ ಸುಖೇಶ (ದ್ವಿತೀಯ) ಹಾಗೂ ಜ್ಯೋಡಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿನಾಯಕ ದೇಸಾಯಿ (ತೃತೀಯ) ಸ್ಥಾನ ಪಡೆದಿದ್ದಾರೆ.

ಗುಂಡು ಎಸೆತ: ಸುಂಕದಕಟ್ಟೆಯ ಎಸ್.ಎನ್.ಎಸ್ ಪಾಲಿಟೆಕ್ನಿಕ್‌ನ ರೋಹನ ಡಿಸೋಜಾ (ಪ್ರಥಮ), ನಿಟ್ಟೆಯ ಎನ್.ಆರ್.ಎ.ಎಂ ಪಾಲಿಟೆಕ್ನಿಕ್ ಸುಹಾರ ಕುಲಾಲ (ದ್ವಿತೀಯ) ಹಾಗೂ ಕಾರವಾರದ ಅನುಪ ರಾಯ್ಕರ್ (ತೃತೀಯ). ಡಿಸ್ಕರ್ ಥ್ರೋ: ನಿಟ್ಟೆಯ ಎನ್.ಆರ್.ಎ.ಎಂ. ಪಾಲಿಟೆಕ್ನಿಕ್ ಕೀರ್ತಿರಾಜ ಕೆ.ಎಸ್ (ಪ್ರಥಮ), ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನ ಶಿಶಿರ ಶೆಟ್ಟೆ (ದ್ವಿತೀಯ) ಹಾಗೂ ಕೆಜಿಎ್ ಸರ್ಕಾರಿ ಪಾಲಿಟೆಕ್ನಿಕ್‌ನ ರೋಹಿತ. ಆರ್ (ತೃತೀಯ) ಸ್ಥಾನ ಪಡೆದಿದ್ದಾರೆ. ಎತ್ತರ ಜಿಗಿತ: ಚನ್ನರಾಯಪಟ್ಟಣದ ವೆಸ್ಟ್ ಹಿಲ್ ಪಾಲಿಟೆಕ್ನಿಕ್ ಕಾಲೇಜಿನ ಪ್ರೀತಮ್ (ಪ್ರಥಮ), ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್‌ನ ಶಶಿಧರ ಕೆ.ಜಿ (ದ್ವಿತೀಯ) ಹಾಗೂ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನ ಚೇತನ (ತೃತೀಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net