45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ

Vaccine
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು, 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ಹಾಕುವುದು ಅಗತ್ಯವಾಗಿದೆ.

ಕೇಂದ್ರ ಸರಕಾರದಿಂದ ಹಂಚಿಕೆಯಾದ ಲಸಿಕೆಯನ್ನು ರಾಜ್ಯ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಪಡೆಯಲು ಬಾಕಿ ಉಳಿದಿರುವ ಲಾನುಭವಿಗಳಿಗೆ ಮಾತ್ರ ಬಳಸಲು ನಿರ್ಧರಿಸಿದೆ. ಹೀಗಾಗಿ 18 ರಿಂದ 44 ವರ್ಷ ವಯೋಮಾನದವರ ಕೋವಿಡ್ ಲಸಿಕೆ ಅಭಿಯಾನವನ್ನು ಮೇ 14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

18 ರಿಂದ 44 ವರ್ಷದೊಳಗಿನ ಆರೋಗ್ಯ ಕಾರ್ಯಕರ್ತರು 2ನೇ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದರೆ ಅಂತಹ ಲಾನುಭವಿಳು ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದು 8 ವಾರಗಳನ್ನು ಪೂರ್ಣಗೊಳಿಸಿರುವ ಮತ್ತು ಕೋವ್ಯಾಕ್ಸಿನ್ ಮೊದಲನೇ ಡೋಸ್ ಪಡೆದು 6 ವಾರಗಳನ್ನು ಪೂರ್ಣಗೊಳಿಸಿರುವ ಲಾನುಭವಿಗಳಿಗೆ ಮೊದಲು ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net