ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ

BKT 71
Published on

ಬಾಗಲಕೋಟೆ: ದೇಶದಲ್ಲಿ ತಕ್ಷೃಣವೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು. ಕೋವಿಡ್‌ನಿಂದ ಪ್ರಾಣ ಕಳೆದುಕೊಂಡವರ ಸಾವಿನ ಹೊಣೆ ಹೊತ್ತು ರಾಜೀನಾಮೆ ನೀಡಲು ರಾಷ್ಟ್ರಪತಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆದೇಶಿಸಬೇಕು ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಶುಕ್ರವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಎಸ್.ಎಸ್.ನಾಯ್ಕಲಮಠ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷೃ ರಮೇಶ ಬದ್ನೂರ ಮಾತನಾಡಿ, ಕೋವಿಡ್ ಸೋಂಕಿನಿಂದ ದೇಶವೇ ತಲ್ಲಣಗೊಂಡಿದೆ. ಜೀವ ಉಳಿಸಿಕೊಳ್ಳಲು, ಜೀವನ ನಡೆಸಲು ಜನರು ಪರದಾಡುತ್ತಿದ್ದಾರೆ. ಕಣ್ಣೀರಿನಲ್ಲಿ ಬದುಕು ಸಾಗಿಸುವಂತಾಗಿದೆ. ಈ ವರ್ಷ ಅನೇಕ ರಾಷ್ಟ್ರಗಳು ಕೋವಿಡ್ ಹಾವಳಿಯಿಂದ ಮುಕ್ತಿ ಪಡೆದರು ಸಹ ಭಾರತ ಅತ್ಯಂತ ಭೀಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಟ್ಟ ಪರಿಸ್ಥಿತಿ ಇದ್ದರು ಇದು ವರೆಗೂ ಕೇಂದ್ರ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡದಿರುವುದು ನಾಚಿಕೆಗೇಡಿನ ಸಂಗತಿ. ಮೆಡಿಕಲ್ ಮಾಫಿಯಾದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಸೋಂಕಿತರು ಬೆಡ್‌ಗಳು ದೊರೆಯದೇ ಪರದಾಡುತ್ತಿದ್ದಾರೆ. ತಜ್ಞರ ತಂಡ ವರದಿ ನೀಡಿದರು ಸರ್ಕಾರಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಪ್ರಧಾನಿ ಮೋದಿ ಆದಿಯಾಗಿ ಎಲ್ಲ ರಾಜಕೀಯ ಪಕ್ಷದವರು ಚುನಾವಣೆ ರ‌್ಯಾಲಿ ನಡೆಸಲು ಮಗ್ನರಾಗಿದ್ದರು. ಇದರ ಪರಿಣಾಮ ಇಂದು ಜನ ಸಾಮಾನ್ಯರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ ಎಂದು ಕಿಡಿಕಾರಿದರು.

ಕೂಡಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು. ಆಮ್ಲಜನಕ ಮತ್ತು ಆರೋಗ್ಯ ಇಲಾಖೆಯ ಅವ್ಯವಸ್ಥೆಯಿಂದ ಬಲಿಯಾದ ಪ್ರತಿಯೊಬ್ಬ ಮೃತನ ಕುಟುಂಬಕ್ಕೆ 10 ಲಕ್ಷೃ ರೂ. ಪರಿಹಾರ ನೀಡಬೇಕು, ದೇಶದ ಜನತೆಯ ಹಿತ ಕಾಪಾಡಲು ಸಂಪೂರ್ಣ ವಿಲವಾಗಿರುವ ಪ್ರಧಾನಮಂತ್ರಿಗಳು ಹಾಗೂ ಅವರ ಸಚಿವ ಸಂಪುಟದ ಸಚಿವರು ತಕ್ಷೃಣವೇ ರಾಜೀನಾಮೆ ನೀಡಬೇಕು. ರಾಷ್ಟ್ರಪತಿಗಳು ಕೂಡಲೇ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net