

ಬಾಗಲಕೋಟೆ: ಕೋವಿಡ್ ಸೋಂಕು ಹರಡಿದ್ದರಿಂದ ಸಾಲ ವಸೂಲಾತಿ ಕಷ್ಟವಾಗಿದೆ. ಇದರಿಂದ ಹಣಕಾಸು ಸಂಸ್ಥೆಗಳು ತುಂಬಾ ಸಮಸ್ಯೆ ಎದುರಿಸುತ್ತಿವೆ ಎಂದು ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಅಶೋಕ ಲಾಗಲೋಟಿ ಹೇಳಿದರು.
ನವನಗರದ ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಭಾನುವಾರ ನಡೆದ 24ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿವರ್ಷ ಲಾಭದತ್ತ ಸಾಗುತ್ತಿದ್ದ ಬ್ಯಾಂಕ್ ಈ ಬಾರಿ ಕೋವಿಡ್ ಸಂಕಷ್ಟದಿಂದ ಸಾಲ ವಸೂಲಾತಿ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಸಂಘವು 341 ಸದಸ್ಯರೊಂದಿಗೆ ಆರಂಭವಾಗಿ ಸದ್ಯ 5895 ಸದಸ್ಯರನ್ನು ಹೊಂದಿದೆ. 153,63,23,253 ದುಡಿಯುವ ಬಂಡವಾಳ ಹೊಂದಿದೆ. 3,63,93,448 ನಿಧಿ, 69,32,66,744 ರೂ. ಸಾಲವನ್ನು ವಿತರಿಸಲಾಗಿದೆ. ಪ್ರಸಕ್ತ ವರ್ಷ 60,14,000 ರೂ. ಸಂಸ್ಥೆ ಲಾಭ ಗಳಿಸಿದೆ ಎಂದರು.
ಪ್ರತಿಯೊಬ್ಬ ಸಾಲಗಾರರು ಮತ್ತು ಜಾಮೀನುದಾರರು ಸಾಲವನ್ನು ಸರಿಯಾದ ವೇಳೆಯಲ್ಲಿ ಮರು ಪಾವತಿ ಮಾಡಿ ಸಂಘವು ಅಭಿವೃದ್ಧಿ ಹೊಂದಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬ್ಯಾಂಕ್ ಅಧ್ಯಕ್ಷ ಸಿದ್ದಣ್ಣ ಕಾಖಂಡಕಿ, ನಿರ್ದೇಶಕರಾದ ಎಂ.ಎಸ್. ನಾಡಗೌಡರ, ಬಸಲಿಂಗಪ್ಪ ಹೊಕ್ರಾಣಿ, ನಿಂಗಣ್ಣ ಗೋಡಿ, ಪ್ರಕಾಶ ನ್ಯಾಮಗೌಡರ, ಬಾಳಪ್ಪ ಹಟ್ಟಿ, ಧರಿಯಪ್ಪ ಯಳ್ಳಿಗುತ್ತಿ, ಮುತ್ತಪ್ಪ ಕೆಂಪನ್ನವರ, ಪಾರ್ವತಿ ಜಾಗನೂರ, ಪರಸಪ್ಪ ಮಾದರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬು ನಾಡಗೌಡರ ಸೇರಿದಂತೆ ಬ್ಯಾಂಕ್ ಸಿಬ್ಬಂದಿ, ಸದಸ್ಯರು ಉಪಸ್ಥಿತರಿದ್ದರು.
ನೀರಲಕೇರಿ ಪಿಕೆಪಿಎಸ್ ಅಧ್ಯಕ್ಷ ದುಂಡಪ್ಪ ಏಳೆಮ್ಮಿ, ಉಪಾಧ್ಯಕ್ಷ ಸಂಗಪ್ಪ ಮುಗಜೋಳ, ಇಲಾಳದ ಯಲ್ಲಪ್ಪ ಮೇಟಿ, ಬಸವೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿದ್ದಣ್ಣ ಗೋಡಿ, ಇಲಾಳ ಪಿಕೆಪಿಎಸ್ ಅಧ್ಯಕ್ಷ ಯಲ್ಲಪ್ಪ ಮೇಟಿ, ಸೀಮಿಕೇರಿಯ ಪಿಕೆಪಿಎಸ್ ಉಪಾಧ್ಯಕ್ಷ ವೀರಭದ್ರಪ್ಪ ನಾಯಕ ಅವರನ್ನು ಸನ್ಮಾನಿಸಲಾಯಿತು.
EndFragment