ಕಂಟೈನ್‌ಮೆಂಟ್ ರೆನ್‌ಗೆ ಡಿಸಿ ಭೇಟಿ

BKT 243
Published on

ಬಾಗಲಕೋಟೆ: ನಗರದ ಮಾರವಾಡಿ ಗಲ್ಲಿಯಲ್ಲಿ ಒಂದೇ ಕುಟುಂಬದ 13 ಜನರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಸೋಂಕಿತರ ಮನೆ ಸುತ್ತಮುತ್ತಲು 100 ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್ ರೆನ್ ನಿರ್ಮಿಸಲಾಗಿದೆ. ಬುಧವಾರ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಡಿ, ಕೋವಿಡ್ 2ನೇ ಅಲೇ ಭೀತಿ ಉಂಟಾಗಿದ್ದು, ಒಂದೇ ಕುಟುಂಬದ 13 ಜನರಿಗೆ ಸೋಂಕು ತಗಲಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಂಕಿತ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗಿದ್ದು, ಸೊಂಕು ತಗಲಿದ ಮನೆಯ 3 ಜನ ಸದಸ್ಯರು ಹಾಗೂ ಚಾಲಕ ಮಹಾರಾಷ್ಟ್ರದ ಸಾಂಗಲಿಗೆ ಹೋಗಿ ಮಾ.14 ರಂದು ಬಾಗಲಕೋಟೆಗೆ ಬಂದಿದ್ದಾರೆ. ಅವರ ಸಂಪರ್ಕದಿಂದ ಮನೆಯವರಿಗೆಲ್ಲ ಸೊಂಕು ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ಸೊಂಕು ದೃಢಪಟ್ಟ ಮನೆಯ ಸುತ್ತಲಿನ ಕಂಟೇನ್‌ಮೆಂಟ್ ರೆನ ವ್ಯಾಪ್ತಿಯಲ್ಲಿ 12 ಮನೆಗಳಿದ್ದು, ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಂಕು ದೃಢಪಟ್ಟ 13 ಜನರು ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ರೀತಿಯ ತೊಂದರೆ ಇರುವದಿಲ್ಲ. ಸೊಂಕು ದೃಡಪಟ್ಟವರ ಪೈಕಿ ಓರ್ವ ವೃದ್ಧ್ದ ಮಹಿಳೆ ಜಿಲ್ಲಾ ಆಸ್ಪತ್ರೆ, ಮತ್ತೊರ್ವ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದವರು ಹೋಮ್ ಐಸೋಲೇಷನ್‌ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net