

ಬಾಗಲಕೋಟೆ: ಕೋವಿಡ್ ಹೆಮ್ಮಾರಿ ತನ್ನ ಕರಾಳ ಮುಖ ಪ್ರದರ್ಶನ ಮಾಡ ತೊಡಗಿದ್ದು, ಜಿಲ್ಲೆಯು ಅಕ್ಷರಶಃ ನಲುಗುತ್ತಿದೆ. ಸೋಮವಾರ ಗರಿಷ್ಠ ಪ್ರಮಾಣದಲ್ಲಿ ಹೊಸ ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಡೆಡ್ಲಿ ಕರೊನಾ ಐವರು ಸೋಂಕಿತರನ್ನು ಬಲಿಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಕೋವಿಡ್‌ನಿಂದ 230 ಜನ ಗುಣಮುಖರಾಗಿದ್ದು, ಹೊಸದಾಗಿ 569 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಹೊಸದಾಗಿ ಬಾಗಲಕೋಟೆ 233, ಬಾದಾಮಿ 103, ಜಮಖಂಡಿ 82, ಹುನಗುಂದ 72, ಮುಧೋಳ 59, ಬೀಳಗಿ ತಾಲೂಕಿನ 20 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಲ್ಲಿಯವರೆಗೆ ಒಟ್ಟು 18864 ಕೋವಿಢ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 15891 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಕೋವಿಡ ಲ್ಯಾಬ್ನಲ್ಲಿ ಪರೀಕ್ಷಿಲಾಗುತ್ತಿದ್ದ 6050 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 559969 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 534455 ನೆಗಟಿವ ಪ್ರಕರಣ ಹಾಗೂ 158 ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು 2815 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್ಗಳು ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.