ಸೆನ್ಸರ್ ಆಧಾರಿತ ಸ್ಯಾನಿಟೈಸರ್ ಯಂತ್ರ ನಿರ್ಮಾಣ

BKT NEWS 11-1
Published on

ಬಾಗಲಕೋಟೆ: ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರದ ಆದೇಶದಂತೆ ಶಾಲೆ-ಕಾಲೇಜುಗಳು ಕಾರ್ಯ ಚಟುವಟಿಕೆ ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳು, ಶಿಕ್ಷಕರು ಮನೆಯಲ್ಲಿಯೇ ಕಾಲ ಕೆಳಯುವಂತಾಗಿದೆ. ಈ ಸಮಯ ಸದುಪಯೋಗ ಪಡೆಸಿಕೊಂಡು ಇಲ್ಲೊಬ್ಬ ವಿದ್ಯಾರ್ಥಿ ಸೆನ್ಸರ್ ಆಧಾರಿತ ಸ್ಯಾನಿಟೈಸರ್ ಯಂತ್ರ ನಿರ್ಮಾಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿ ಅಭಿಷೇಕ ಹಿಪ್ಪರಗಿ ನೇತೃತ್ವದ ತಂಡ ಮನೆಯಲ್ಲಿ ಸಮಯ ವ್ಯರ್ಥ ಮಾಡದೇ ಸೃಜನಾತ್ಮಕವಾಗಿ ಯೋಚಿಸಿ ಸೆನ್ಸರ್ ಆಧಾರಿತ ಸ್ಯಾನಿಟೈಸರ್ ಯಂತ್ರ ಸಿದ್ಧಪಡಿಸಿದ್ದಾರೆ. ಸ್ಥಳೀಯವಾಗಿ ಸಿಗುವ ಇಲೆಕ್ಟ್ರಾನಿಕ್ ಉಪಕರಣ ಬಳಸಿ ಸಿದ್ಧಪಡಿಸಿದ್ದು ವಿಶೇಷವಾಗಿದೆ. ಕೇವಲ ಎರಡು ಸಾವಿರ ರೂಪಾಯಿಯಲ್ಲಿ ಸಿಗಬಹುದಾದ ಯಂತ್ರ ಇದಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ, ಬಿಇಸಿ ತಾಂತ್ರಿಕ ನಿರ್ದೇಶಕ ಡಾ.ಆರ್.ಎನ್.ಹೆರಕಲ್ಲ, ಪ್ರಾಚಾರ್ಯ ಎಸ್.ಎಸ್.ಇಂಜಗನೇರಿ ಮತ್ತು ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಸುರೇಶ ಜಂಗಮಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net