

ಬಾಗಲಕೋಟೆ: ಜಿಲ್ಲೆಯ ಓರ್ವ ವೃದ್ಧ ಸೇರಿ ಮೂವರು ಕೋವಿಡ್ ಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಗುಣವಾದವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 65 ವರ್ಷದ ವೃದ್ಧ ಪಿ-686, ಬನಹಟ್ಟಿಯ 25 ವರ್ಷದ ಯುವಕ ಪಿ-854 ಹಾಗೂ ಮುಧೋಳನ 23 ವರ್ಷದ ಯುವಕ ಪಿ-977 ಕೋವಿಡ್‌ನಿಂದ ಗುಣಮುಖರಾಗಿದ್ದು, ಜಿಲ್ಲಾ ಆಸ್ಪತ್ರೆಯಿಂದ ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಜಿಲ್ಲಾ ಶಸ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು ಎಂದು ತಿಳಿಸಿದ್ದಾರೆ.
ಢಾಣಕಶಿರೂರಿನ 65 ವರ್ಷದ ವೃದ್ಧನಿಗೆ ಇದೇ ಗ್ರಾಮದ 23 ವರ್ಷದ ಗರ್ಭಿಣಿ (ಪಿ-607) ಸಂಪರ್ಕದಿಂದ ಮೇ 6 ರಂದು ಸೋಂಕು ದೃಢಪಟ್ಟಿತ್ತು. ಬನಹಟ್ಟಿಯ ಪಿ-854 ವ್ಯಕ್ತಿಗೆ ಅಹಮದಾಬಾದ್‌ನ ತಬ್ಲಿ ಜಮಾತ್ ನಂಟಿನಿಂದ ಸೋಂಕು ದೃಢಪಟ್ಟರೆ, ಮುಧೋಳನ ಪಿ-977 ವ್ಯಕ್ತಿಗೂ ಸಹ ತಬ್ಲಿ ಜಮಾತ್ ಮತ್ತು ಮೈಸೂರಿನ ನಂಟಿನಿಂದ ಸೋಂಕು ದೃಢಪಟ್ಟಿತ್ತು.
30ರವರೆಗೆ ಜಿಲ್ಲಾದ್ಯಂತ ಲಾಕ್‌ಡೌನ್
ಬಾಗಲಕೋಟೆ ಜಿಲ್ಲಾದ್ಯಂತ ಜೂ.30ರ ವರೆಗೆ ಲಾಕ್‌ಡೌನ್ ಮುಂದುವರಿದಿದ್ದು, ಪ್ರತಿದಿನ ಸಂಜೆ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಅನವಶ್ಯಕ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು, ಯಾವುದೇ ರೋಗವನ್ನು ಹೊಂದಿರುವ ರೋಗಗ್ರಸ್ಥ ವ್ಯಕ್ತಿಗಳು ಹಾಗೂ ಗರ್ಭಿಣಿಯರು ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣಗಳಲ್ಲದ ಹೊರತು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಈ ಆದೇಶವನ್ನು ಪೊಲೀಸ್ ಅಧೀಕ್ಷಕರು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮವಹಿಸಬೇಕು. ಆದೇಶ ಅನುಷ್ಠಾನಕ್ಕೆ ಇತರ ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸೇವೆಯನ್ನು ಅಗತ್ಯವಿದ್ದಲ್ಲಿ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು. ಜತೆಗೆ ಆದೇಶ ಉಲ್ಲಂಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
EndFragment