

ಬಾಗಲಕೋಟೆ: ಕೋವಿಡ್ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಯುಷ್ ಔಷಧಗಳ ಕಿಟ್‌ಗಳನ್ನು ಬಾಗಲಕೋಟೆ ಜಿಲ್ಲಾ ಪತ್ರಕರ್ತರಿಗೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಣ್ಣ ತೋಟದ ಗುರುವಾರ ವಿತರಿಸಿದರು.
ನಂತರ ಮಾತನಾಡಿದ ಅವರು, ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಯುಷ್ ಔಷಧಗಳಾದ ಅರ್ಸೆನಿಕ್ ಆಲ್ಬಂ-30 ಮಾತ್ರೆಗಳು ಸಂಶಮನಿ ವಟಿ, (ಆಯುರ್ವೇದ)-250 ಮಿ.ಗ್ರಾಂ ಮಾತ್ರೆಗಳು ಹಾಗೂ ಅರ್ಕ್ ಎ ಅಜೀಬ್(ಯುನಾನಿ), ಅರ್ಸೆನಿಕ್ ಅಲ್ಬಂ(ಹೊಮಿಯೋಪತಿ)ಔಷಧಗಳ ಮಹತ್ವ ಹಾಗೂ ಅದನ್ನು ಸೇವಿಸುವ ವಿಧಾನವನ್ನು ತಿಳಿಸಿಕೊಟ್ಟರು.
90 ಜನ ಪತ್ರಕರ್ತರಿಗೆ ಆಯುಷ್ ಔಷಧ ವಿತರಿಸಲಾಯಿತು. ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ, ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಕಾನಿಪ ಜಿಲ್ಲಾಧ್ಯಕ್ಷ ಸುಭಾಷ್ ಹೊದ್ಲುರ, ಆಯುಷ್ ಇಲಾಖೆ ಸಿಬ್ಬಂದಿ ಗಿರೀಶ ಕಂಬಳಿ, ವಿನಾಯಕ ಅವ್ವಣ್ಣವರ ಉಪಸ್ಥಿತರಿದ್ದರು.
EndFragment