ಜೋಳಕ್ಕೆ ಕ್ವಿಂಟಾಲ್‌ಗೆ 2640 ರೂ.

BKT 101
Published on

ಬಾಗಲಕೋಟೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎ್.ಎ.ಕ್ಯೂ. ಗುಣಮಟ್ಟದ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಾಲ್‌ಗೆ 2640 ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತದೆ. ರೈತರ ಹಿತದೃಷ್ಟಿಯಿಂದ ಹೋಬಳಿ ಮಟ್ಟದಲ್ಲಿ ಖರೀದಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ಕೆ.ಎ್.ಸಿ.ಎಸ್. ಮೂಲಕ 6 ಖರೀದಿ ಕೇಂದ್ರಗಳನ್ನು ತಾಲೂಕಿಗೆ ಒಂದರಂತೆ ತೆರೆಯಲಾಗಿತ್ತು. ರೈತರ ಹಿತ ದೃಷ್ಟಿಯಿಂದ ಗ್ರಾಮೀಣ ಭಾಗದ ಹೋಬಳಿ ವ್ಯಾಪ್ತಿಯಲ್ಲಿ ಪಿಕೆಪಿಎಸ್, ವಿಎಸ್‌ಎಸ್‌ಎನ್, ಎ್ಪಿಒ, ಟಿಎಪಿಸಿಎಂಎಸ್ ಮೂಲಕ ಹೆಚ್ಚುವರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಕರ್ನಾಟಕ ಭಾಗದ ಆಹಾರದಲ್ಲಿ ಹೆಚ್ಚಾಗಿ ಜೋಳ ಬಳಸಲಾಗುತ್ತದೆ. ಹೀಗಾಗಿ ಅಕ್ಕಿಯ ಜತೆ ಜೋಳ ನೀಡಲು ಆಹಾರ ಇಲಾಖೆ ಸಚಿವರು ನಿರ್ದೇಶನ ನೀಡಿದ್ದು, ಬೆಂಬಲ ಬೆಲೆ ಯೋಜನೆಯಡಿ 1.60 ಲಕ್ಷ ಕ್ವಿಂಟಾಲ್ ಮಾಲ್ದಂಡಿ ಬಿಳಿ ಜೋಳ ಖರೀದಿಸುವ ಗುರಿ ಹೊಂದಲಾಗಿದೆ. ರೈತರು ಪ್ರತಿ ಎಕರೆಗೆ 15 ಕ್ವಿಂಟಾಲ್‌ನಂತೆ ಖರೀದಿಸಲಾಗುತ್ತಿದೆ. ಖರೀದಿಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಗುಣಮಟ್ಟದ ಬಿಳಿ ಜೋಳವನ್ನು 50 ಕೆಜಿ ಸಾಮರ್ಥ್ಯದ ಗೋಣಿ ಚೀಲದಲ್ಲಿ ಖರೀದಿ ಕೇಂದ್ರಕ್ಕೆ ತರಬೇಕು. ಪ್ರತಿ ಚೀಲಕ್ಕೆ 22 ರೂ.ನಂತೆ ಹಾಗೂ ಖರೀದಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಾಗುತ್ತಿದೆ ಎಂದರು.

ಬಿಳಿ ಜೋಳ ಖರೀದಿ ಕುರಿತು ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿ, ಎಪಿಎಂಸಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ವಿತರಣೆ, ಬ್ಯಾನರ್ ಅಂಟಿಸಲು ಸೂಚಿಸಲಾಗಿದೆ. ಮಧ್ಯವರ್ತಿ, ಏಜೆಂಟರ್ ಸಹಾಯವಿಲ್ಲದೆ ನೇರವಾಗಿ ಮಾಹಿತಿ ಪಡೆದು ಬಿಳಿಜೋಳ ನೀಡಬೇಕು ಎಂದು ತಿಳಿಸಿದರು. ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಡಿಎಚ್‌ಒ ಡಾ.ಅನಂತ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳು
ಬಾದಾಮಿ ತಾಲೂಕಿನಲ್ಲಿ ಕೆಎ್ಸಿಎಸ್‌ಸಿ ಬಾದಾಮಿ, ಪಿಕೆಪಿಎಸ್ ಕೆರೂರ, ಟಿಎಪಿಸಿಎಂಎಸ್ ಬಾದಾಮಿ, ಕೆಎ್ಸಿಎಸ್‌ಸಿ ಗುಳೇದಗುಡ್ಡ, ಬಾಗಲಕೋಟೆ ತಾಲೂಕಿನಲ್ಲಿ ಕೆಎ್ಸಿಎಸ್‌ಸಿ, ಟಿಎಪಿಸಿಎಂಎಸ್ ಬಾಗಲಕೋಟೆ, ಪಿಕೆಪಿಎಸ್ ಹಳ್ಳೂರ, ಅಚನೂರ, ಬೆನಕಟ್ಟಿ, ಇಳಕಲ್ಲ ತಾಲೂಕಿನಲ್ಲಿ ಪಿಕೆಪಿಎಸ್ ಇಳಕಲ್ಲ, ನಂದವಾಡಗಿ, ಬೀಳಗಿ ತಾಲೂಕಿನಲ್ಲಿ ಕೆಎ್ಸಿಎಸ್‌ಸಿ, ಟಿಎಪಿಸಿಎಂಎಸ್ ಬೀಳಗಿ, ಮುಧೋಳ ತಾಲೂಕಿನಲ್ಲಿ ಕೆಎ್ಸಿಎಸ್‌ಸಿ, ಟಿಎಪಿಸಿಎಂಎಸ್ ಮುಧೋಳ, ಹುನಗುಂದ ತಾಲೂಕಿನಲ್ಲಿ ಕೆಎ್ಸಿಎಸ್‌ಸಿ, ಟಿಎಪಿಸಿಎಂಎಸ್, ಪಿಕೆಪಿಎಸ್ ಹುನಗುಂದ, ಪಿಕೆಪಿಎಸ್ ಕರಡಿ, ಕೂಡಲಸಂಗಮ, ಹಿರೇಆದಾಪುರ, ಕಂದಗಲ್ಲ, ಬೂದಿಹಾಳ, ಎ್ಪಿಒ ಅಮರಾವತಿ, ಸೂಳೆಭಾವಿ, ಮೂಗನೂರ, ಪಿಕೆಪಿಎಸ್ ಚಿಕ್ಕ ಸಿಂಗನಗುತ್ತಿ, ಜಮಖಂಡಿ ತಾಲೂಕಿನಲ್ಲಿ ಕೆಎ್ಸಿಎಸ್‌ಸಿ, ಟಿಎಪಿಸಿಎಂಎಸ್ ಜಮಖಂಡಿ, ಪಿಕೆಪಿಎಸ್ ಸಾವಳಗಿ, ಎ್ಪಿಒ ತೊದಲಬಾಗಿ ಕೇಂದ್ರಗಳಲ್ಲಿ ಬಿಳಿ ಜೋಳ ಖರೀದಿಸಲಾಗುತ್ತದೆ.

ಕೋವಿಡ್ ಲಸಿಕೆ ಶೇ.78 ರಷ್ಟು ಸಾಧನೆ
ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ವಿತರಣೆಯಲ್ಲಿ ಮೊದಲನೇ ಮತ್ತು ಎರಡನೇ ಹಂತದಲ್ಲಿ ಶೇ.78 ರಷ್ಟು ಸಾಧನೆ ಮಾಡಲಾಗಿದೆ. ಈಗ 3ನೇ ಹಂತದ ಲಸಿಕೆ ವಿತರಣೆ ಅಭಿಯಾನ ಆರಂಭಿಸಲಾಗಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 73 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಆಸ್ಪತ್ರೆ, 5 ತಾಲೂಕು ಆಸ್ಪತ್ರೆ, 8 ಸಮುದಾಯ ಆರೋಗ್ಯ ಕೇಂದ್ರ, 48 ಪ್ರಾಥಮಿಕ ಆರೋಗ್ಯ ಕೇಂದ್ರ, 7 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 4 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

3ನೇ ಹಂತದಲ್ಲಿ 45 ರಿಂದ 59 ವರ್ಷದ ಅನಾರೋಗ್ಯ ಹೊಂದಿದವರು ಹಾಗೂ 60 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1.54 ಲಕ್ಷ ಜನ 60 ವರ್ಷದ ಮೇಲ್ಪಟ್ಟವರಿದ್ದು, ಇದರಲ್ಲಿ 1104 ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದ್ದರಿಂದ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮನವಿ ಮಾಡಿದ್ದಾರೆ.

ಬಿಳಿ ಜೋಳವನ್ನು ನೀಡುವ ರೈತರು ಹೆಸರು ನೋಂದಣಿಗೆ ಕೃಷಿ ಇಲಾಖೆ ನೀಡಿರುವ ಫ್ರೂಟ್ಸ್ ಐಡಿ ನಂಬರ್ ಖರೀದಿ ಕೇಂದ್ರದಲ್ಲಿ ನೀಡಬೇಕು. ನೋಂದಣಿ ಹಾಗೂ ಖರೀದಿಗೆ ಮಾ.31 ಕೊನೆಯ ದಿನವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
- ಕೆ.ರಾಜೇಂದ್ರ
ಜಿಲ್ಲಾಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net