ಸರ್ವರು ಸಂವಿಧಾನ ಓದುವುದು ಕಡ್ಡಾಯ

BKT NEWS 5-3
Published on

ಬಾಗಲಕೋಟೆ: ನಮ್ಮ ಸಂವಿಧಾನ ಸಮಾನತೆ ಹಕ್ಕು, ಪರಸ್ಪರ ಭ್ರಾತೃತ್ವ, ಸರ್ವ ಧರ್ಮಗಳ ಸಮನ್ವಯತೆಯಿಂದ ಕೂಡಿದ ಪರಿಪೂರ್ಣತೆ ಹೊಂದಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯ ಸಭಾಭವನದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಬಾಗಲಕೋಟೆ ಹಾಗೂ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಸಂವಿಧಾನ ಓದು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಕಡ್ಡಾಯವಾಗಿ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮಾತನಾಡಿ, ನಮ್ಮ ದೇಶದ ಸಂವಿಧಾನ ಸಮಾನತೆಯನ್ನು ಸಾಕಾರಗೊಳಿಸುವ ಒಂದು ಮಹತ್ವದ ಕಲ್ಪನೆಯಾಗಿದೆ. ಸ್ವಾತಂತ್ರೃ ಭಾರತದ ಏಳು ದಶಕಗಳ ಸಾಧನೆ ಮಾಡಿದ ಪ್ರಬಲ ಸಂವಿಧಾನವಾಗಿದೆ. ಇದನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ತ್ಯಾಗ ಸ್ಮರಿಸಬೇಕು ಎಂದರು.

ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ. ನಂಜುಂಡಸ್ವಾಮಿ ಉಪನ್ಯಾಸ ನೀಡಿದರು. ತೋವಿವಿ ಕುಲಪತಿ ಡಾ. ಕೆ.ಎಂ. ಇಂದಿರೇಶ, ವಕೀಲ ಬಸವರಾಜ ಬಾದಾಮಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರಚಾರ ಅಭಿಯಾನದ ನೋಡಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ, ತೋವಿವಿಯ ಡೀನ್ ಡಾ.ಎಸ್.ಐ. ಅಥಣಿ ಸೇರಿ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ವಸಂತ ಗಾಣಿಗೇರ ಸ್ವಾಗತಿಸಿದರು. ಸ್ವಯಂ ಸೇವಕ ಭರತಗೌಡ ನಿರೂಪಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net