ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ಜೋಳಿಗೆ ಹಿಡಿದ ಮಾಜಿ ಶಾಸಕ

BKT 22-3
Published on

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರು ಜೋಳಿಗೆ ಹಿಡಿದು ಪಕ್ಷದ ಕಾರ್ಯಕರ್ತರ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಕ್ಕೆ ಇಳಿದಿದ್ದಾರೆ.

ಶನಿವಾರ ಮೊದಲ ದಿನ ತಮ್ಮ ಹುಟ್ಟೂರು ಸೂಳಿಭಾವಿಯಿಂದ ದೇಣಿಗೆ ಸಂಗ್ರಹ ಶುರು ಮಾಡಿದ್ದು, ಗ್ರಾಮ ಹಾಗೂ ಇಳಕಲ್ಲ ನಗರದ ಪಕ್ಷದ ಕಾರ್ಯಕರ್ತರೊಬ್ಬರು ಸೇರಿ ಒಟ್ಟು 88 ಸಾವಿರ ರೂ. ಸಂಗ್ರಹವಾಗಿದೆ.

ಎಸ್.ಜಿ. ನಂಜಯ್ಯನಮಠ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಳಿಕ ತಮ್ಮ ಅಧಿಕಾರ ಅವಧಿಯಲ್ಲಿ ಬಾಗಲಕೋಟೆ ನವನಗರದಲ್ಲಿ ಪಕ್ಷದ ಕಚೇರಿ ಕಟ್ಟಡ ಪೂರ್ಣಗೊಳಿಸುವ ಅಭಯ ನೀಡಿದ್ದರು. ಈಗಾಗಲೇ ಕಚೇರಿ ಕಟ್ಟಡ ಕಾಮಗಾರಿ ಶುರುವಾಗಿದ್ದು ಒಟ್ಟು 50 ಲಕ್ಷ ರೂ. ಖರ್ಚು ಬರಲಿದೆಯಂತೆ.

ಬರೀ ಪಕ್ಷದ ಶಾಸಕರು, ಮುಖಂಡರಿಂದ ಹಣ ಸಂಗ್ರಹಿಸದೆ ಪಕ್ಷದ ಕಾರ್ಯಕರ್ತರು ಕೊಡುವ ಹತ್ತತ್ತು ರೂಪಾಯಿ ಸಹ ಈ ಕಟ್ಟಡಕ್ಕೆ ಬಳಕೆ ಆಗಬೇಕು ಎನ್ನುವ ಕಾರಣಕ್ಕೆ ಜೋಳಗಿ ಹಿಡಿದು ಭಿಕ್ಷೆ ಬೇಡುತ್ತಿದ್ದೇನೆ. ಕಾರ್ಯಕರ್ತರಿಂದ ಒಳ್ಳೆಯ ಬೆಂಬಲ ವ್ಯಕ್ತವಾಗಿದೆ ಎಂದು ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net