ಗಾಂಧೀಜಿ ತತ್ವ ನಮಗೆ ಆದರ್ಶವಾಗಲಿ

BKT NEWS 26-3
Published on

ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಸಂವಿಧಾನ ವಿರೋಧಿಯಾಗಿವೆ. ಬುದ್ಧ, ಬಸವ, ಅಂಬೇಡ್ಕರ್ ತತ್ವ ನಮಗೆ ಆದರ್ಶವಾಗಬೇಕು. ಮಹಾತ್ಮ ಗಾಂಧೀಜಿ ಕೊಂದ ಗೋಡ್ಸೆ ನಮಗೆ ಮಾದರಿಯಾಗಬಾರದು ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ಜಿಲ್ಲಾಡಳಿತ ಭವನ ಎದುರು ಪೌರತ್ವ ಕಾಯ್ದೆ ವಿರೋಧಿಸಿ ನಾವು ಭಾರತೀಯರು ಸಂಘಟನೆ ಆಯೋಜಿಸಿರುವ ಧರಣಿಯಲ್ಲಿ ಬುಧವಾರ ಭಾಗವಹಿಸಿ ಅವರು ಮಾತನಾಡಿದರು.

ಹೋರಾಟ ಮಾಡುವವರಿಗೆ ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ. ಇದು ಯಾವ ನ್ಯಾಯ? ನಮ್ಮ ಹೋರಾಟ ನಿರಂತರವಾಗಿರುತ್ತದೆ. ಬಿಜೆಪಿಯವರಿಗೆ ನಾನು ಶರಣಾಗಲ್ಲ ಎಂದರು.

ಹೋರಾಟಗಾರ್ತಿ ನಜ್ಮಾ ನಜೀರ ಮಾತನಾಡಿ, ಪೌರತ್ವ ಕಾಯ್ದೆ ದೇಶದ ಜನರಿಗೆ ಮರಣ ಶಾಸನವಾಗಿದೆ. ಅದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

ಸ್ವಾತಂತ್ರೃ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್, ನಕಲಿ ಹೋರಾಟಗಾರ ಅಂತ ಕರೆದ ವಿಜಯಪುರ ಶಾಸಕ ಬಸನಗೌಡ ಪಾಟೀಲ ವಿರುದ್ಧ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬಿಟಿಡಿಎ ಮಾಜಿ ಅಧ್ಯಕ್ಷ ಎ.ಡಿ. ಮೊಕಾಶಿ, ಮುಖಂಡರಾದ ಎಂ.ಎಂ. ನಬಿವಾಲೆ, ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಉಸ್ಮಾನಗಣಿ ಹುಮ್ನಾಬಾದ, ಜಬ್ಬಾರ ಕಲಬುರ್ಗಿ, ರಜಾಕ್ ಹಳ್ಳೂರ ಸೇರಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net