ಸರ್ಕಾರದಿಂದ ರೈತರಿಗೆ ವಂಚನೆ

bkt-22-2
Published on

ಬಾಗಲಕೋಟೆ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿ ಮಾಡುತ್ತಿಲ್ಲ ಎಂದು ಆರೋಪಿಸಿ ರೈತರು ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಕೆಡಿಪಿ ಸಭೆ ವೇಳೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಬೆಂಬಲ ಬೆಲೆಯಲ್ಲಿ ಸರ್ಕಾರ ತೊಗರಿ ಖರೀದಿಗೆ ಖರೀದಿ ಕೇಂದ್ರ ಆರಂಭಿಸಿದೆ. ಆದರೆ, ಕೇಂದ್ರದಲ್ಲಿರುವ ಸಿಬ್ಬಂದಿ ಗುಣಮಟ್ಟ ತೊಗರಿ ಇಲ್ಲ ಅಂತ ಸುಳ್ಳು ಆರೋಪ ಮಾಡಿ ತೊಗರಿ ಖರೀದಿ ಮಾಡುತ್ತಿಲ್ಲ. ದೂರದಿಂದ ಟ್ರಾೃಕ್ಟರ್‌ನಲ್ಲಿ ತೊಗರಿ ತಂದು ರೈತರು ವಾಪಸ್ ಹೋಗುವಂತಾಗಿದೆ ಎಂದು ಆರೋಪಿಸಿದರು.

ಎಪಿಸಿಎಂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕ ತೊಗರಿ ನೀಡುವುದು ಅನಿವಾರ್ಯವಾಗುತ್ತದೆ. ಕಡಿಮೆ ಬೆಲೆಗೆ ದಲ್ಲಾಳಿಗಳು ತೊಗರಿ ಖರೀದಿಸಿ ಇದೇ ಕೇಂದ್ರದಲ್ಲಿ ಮಾರಾಟ ಮಾಡುತ್ತಾರೆ. ಇದು ವ್ಯವಸ್ಥಿತ ಪಿತೂರಿಯಾಗಿದೆ. ಸರ್ಕಾರವು ತೊಗರಿ ಖರೀದಿಯಲ್ಲಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ದೂರಿದರು. ಮುದಿಯಪ್ಪ ತಾರನಾಳ, ಶಂಕ್ರಯ್ಯ ಹಿರೇಮಠ, ಗದಿಗೆಪ್ಪ ಎಂ., ಜಗದೀಶ ಮಾಚಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net