ನವೀನ ಚಿಂತನೆಯಿಂದ ಯಶಸ್ಸು ಸಾಧ್ಯ

Meena Chandavarkar
Published on

ಬಾಗಲಕೋಟೆ: ಇಂದಿನ ಯುಗದಲ್ಲಿ ಯಶಸ್ವಿಯಾಗಬೇಕಾದರೆ ನವೀನ ಚಿಂತನೆ ಹೊಂದಿರಬೇಕು ಎಂದು ಬಿವಿವಿ ಸಂಘದ ಮುಖ್ಯ ಸಲಹೆಗಾರತಿ, ವಿಶ್ರಾಂತ ಕುಲಪತಿ ಡಾ.ಮೀನಾ ಆರ್ ಚಂದಾವರಕರ ಹೇಳಿದರು.

ನಗರದ ಬಿವಿವಿ ಸಂಘದ ಬೀಮ್ಸ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನದ ಓರಿಯಂಟೆಷನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಬಿ.ಎ ಸ್ನಾತಕೋತ್ತರ ಪದವಿ ಉಳಿದ ಪದವಿಗಳಿಗಿಂತ ಭಿನ್ನ. ಸಾಕಷ್ಟು ನವೀನ ಹಾಗೂ ಸೃಜಲಶೀಲತೆ ಚಿಂತನೆಯೊಳಗೊಂಡಿದೆ ಎಂದರು. ಬಿವಿವಿ ಸಂಘದ ಕಾಲೇಜು ಸಮಿತಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಬೀಮ್ಸ್ ನಿರ್ದೇಶಕ ಡಾ.ಆರ್.ಜಿ.ಅಳ್ಳಗಿ, ಬಸವೇಶ್ವರ ಕಲಾ ಮಾವಿದ್ಯಾಲಯ ಪ್ರಾಂಶುಪಾಲ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತರಿದ್ದರು. ವೈಶಾಲಿ, ಶಶಾಂಕ ಪ್ರಾರ್ಥಿಸಿದರು. ಪೂಜ್ಯಶ್ರೀ ವಂದಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net