ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ

veeranna charantimath
Published on

ಬಾಗಲಕೋಟೆ: ಬಿವಿವಿ ಸಂಘದಿಂದ ಮುಂದಿನ ವರ್ಷ ಬೆಂಗಳೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಲಾಗುವುದು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಶನಿವಾರ ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ 11ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಗಲಕೋಟೆ ವೈದ್ಯಕೀಯ ಕಾಲೇಜಿನ ಪ್ರವೇಶ ಮಿತಿಯನ್ನು 250ಕ್ಕೆ ಹೆಚ್ಚಿಸಲು ಸಂಸ್ಥೆ ಮಾಡಿಕೊಂಡ ಮನವಿಗೆ ಎಂ.ಸಿ.ಐ. ಅನುಮತಿ ನೀಡಿದೆ. ಕರ್ನಾಟಕದಲ್ಲಿ ಈವರೆಗೆ 5 ಕಾಲೇಜುಗಳು ಮಾತ್ರ 250 ಇಂಟೆಕ್ ಹೊಂದಿದ್ದು, ನಿಜಯಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಈ ಸಾಮರ್ಥ್ಯ ಹೊಂದಿರುವ 6ನೇ ಕಾಲೇಜು ಆಗಲಿದೆ ಎಂದರು.

250 ಪ್ರವೇಶಕ್ಕೆ ಪೂರಕವಾಗುವಂತೆ ಎಚ್.ಎಸ್.ಕೆ. ಆಸ್ಪತ್ರೆಯ ಸಾಮರ್ಥ್ಯವನ್ನು ಕೂಡ 1100 ಬೆಡ್‌ಗೆ ವಿಸ್ತರಿಸಲಾಗುತ್ತದೆ. ಜತೆಗೆ 340 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಸಹ ಆರಂಭಿಸಲಾಗುವುದು. ಬಾಗಲಕೋಟೆಯಲ್ಲಿ ಹೋಮಿಯೋಪಥಿ, ನ್ಯಾಚುರೋಪಥಿ ಆಸ್ಪತ್ರೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕವಿವಿ ವಿಶ್ರಾಂತ ಕುಲಪತಿ ಡಾ.ಪ್ರಮೋದ ಗಾಯಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net