ಮುಧೋಳದಲ್ಲಿ ಸೋಂಕು ಪತ್ತೆ ಸಮೀಕ್ಷೆ ಕಾರ್ಯ

BKT 281
Published on

ಬಾಗಲಕೋಟೆ: ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ನೇತೃತ್ವದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಕೋವಿಡ್ ಸೋಂಕು ತಪಾಸಣೆ ಕೈಗೊಳ್ಳಲಾಗಿದೆ. ಇದಕ್ಕೆ ಸಂಘದ ದಂತ ಮಹಾವಿದ್ಯಾಲಯ ವೈದ್ಯರ ತಂಡ ಕೈ ಜೋಡಿಸಿದ್ದು, ಶುಕ್ರವಾರ ಮುಧೋಳ ನಗರದಲ್ಲಿ ಸಂಚರಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿತು.

ಮಹಾವಿದ್ಯಾಲಯದ 20 ವೈದ್ಯರು ಮುಧೋಳ ಪಟ್ಟಣದ ಪ್ರತಿಯೊಂದು ಮನೆಗೆ ತೆರಳಿ ಜ್ವರ, ಕೆಮ್ಮು, ಮತ್ತಿತರ ರೋಗ ಲಕ್ಷಣಗಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ರೋಗದ ಕುರಿತು ಸೂಕ್ತ ತಿಳಿವಳಿಕೆ ನೀಡಿದರು. ಕೋವಿಡ್ ಬಗ್ಗೆ ನಿರ್ಲಕ್ಷೃ ಮಾಡಬಾರದು. ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ವೈದ್ಯರ ತಂಡ ಮನವಿ ಮಾಡಿತು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net