ಬಸವೇಶ್ವರ ಸಿಬಿಎಸ್‌ಇ ಶಾಲೆ ಪುನರಾರಂಭ

BKT-9-2
Published on

ಬಾಗಲಕೋಟೆ: ಕೋವಿಡ್-19 ಪರಿಣಾಮವಾಗಿ ಕಳೆದ ಎಂಟು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಬಿವಿವಿ ಸಂಘದ ಬಸವೇಶ್ವರ ಸಿಬಿಎಸ್‌ಇ ಶಾಲೆ ಸರ್ಕಾರದ ಆದೇಶದಂತೆ ಶುಕ್ರವಾರ ಪುನರಾರಂಭಗೊಂಡಿತು.

ಆನ್‌ಲೈನ್ ತರಗತಿ ಮೂಲಕ ಮನೆಯಲ್ಲಿಯೇ ಪಾಠ ಕೇಳಿ ಬೇಸರಗೊಂಡಿದ್ದ ಮಕ್ಕಳು ಬಹು ದಿನಗಳ ಬಳಿಕ ಜ್ಞಾನ ದೇಗುಲದತ್ತ ಉತ್ಸಾಹದಿಂದ ಹೆಜ್ಜೆ ಹಾಕಿದರು. ತಳಿರು ತೋರಣಗಳಿಂದ ಶಾಲೆ ಶೃಂಗಾರಗೊಳಿಸಲಾಗಿತ್ತು. ಶಾಲೆ ಪ್ರಾಚಾರ್ಯ ಸಿ.ಬಿ.ಸುರೇಶ ಹೆಗ್ಡೆ, ಉಪಪ್ರಾಚಾರ್ಯ ಮಂಗಳಗೌರಿ ಹೆಗ್ಡೆ ಹೂ ಗುಚ್ಛ ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಪ್ರತಿಯೊಂದು ತರಗತಿಯಲ್ಲಿ ಪರಸ್ಪರ ಅಂತರ, ಮಾಸ್ಕ್ ಕಡ್ಡಾಯ ಇತರ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಶಾಲೆಗೆ ಆಗಮಿಸುವ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪಾಲಕರ ಒಪ್ಪಿಗೆ ಪತ್ರ ಪಡೆಯಲಾಯಿತು. ಶಾಲೆ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪ್ರಾಚಾರ್ಯ ಸಿ.ಬಿ ಸುರೇಶ ಹೆಗ್ಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net