

ಬಾಗಲಕೋಟೆ: ಜಿಲ್ಲೆಯ ಬಾದಾಮಿ ನಗರದ ಓರ್ವ ಬಾಲಕಿ, ಢಾಣಕಶಿರೂರ ಗ್ರಾಮದ 5 ಜನ ಸೇರಿ ಒಟ್ಟು 6 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಬುಧವಾರ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.
ಇಲ್ಲಿವರೆಗೆ ಒಟ್ಟು 76 ಕೋವಿಡ್ ಸೋಂಕಿತರ ಪ್ರಕರಣಗಳ ಪೈಕಿ 37 ಜನ ಗುಣಮುಖರಾಗಿದ್ದಾರೆ. ಢಾಣಕಶಿರೂರ ಗ್ರಾಮದ 18 ವರ್ಷದ ಮಹಿಳೆ ಪಿ-680, 45 ವರ್ಷದ ಪುರುಷ ಪಿ-681, 55 ವರ್ಷದ ಮಹಿಳೆ ಪಿ-682, 30 ವರ್ಷದ ಮಹಿಳೆ ಪಿ-685, 40 ವರ್ಷದ ಮಹಿಳೆ ಪಿ-687 ಹಾಗೂ 10 ವರ್ಷದ ಬಾಲಕ ಪಿ-689 ಇವರು ಕೋವಿಡ್‌ನಿಂದ ಗುಣಮುಖರಾದವರು. ಗುಣಮುಖರಾದವರಿಗೆ ಜಿಲ್ಲಾ ಆಸ್ಪತ್ರೆಯಿಂದ ಪ್ರಮಾಣ ಪತ್ರ ನೀಡಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು.
ಬಾದಾಮಿ ನಗರದ ಚಾಲುಕ್ಯ ನಗರದ 18 ವರ್ಷದ ಓರ್ವ ಬಾಲಕಿಗೆ (ಪಿ-680) ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು, ಸ್ಯಾಂಪಲ್ ವರದಿಯಲ್ಲಿ ಕೋವಿಡ್ ಸೋಂಕು ಇರುವುದು ಮೇ 6 ರಂದು ದೃಢಪಟ್ಟಿತ್ತು. ಅದೇ ರೀತಿ ಢಾಣಕಶಿರೂರ ಗ್ರಾಮದ ಪಿ-681, ಪಿ-682, ಪಿ-685, ಪಿ-687 ಹಾಗೂ ಪಿ-689 ಇವರಿಗೆ ಅದೇ ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ (ಪಿ-607) ಯಿಂದ ಮೇ 6 ರಂದು ಸೋಂಕು ದೃಢಪಟ್ಟಿತ್ತು. ಈಗ ಎಲ್ಲರೂ ಕೋವಿಡ್‌ನಿಂದ ಸಮಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
EndFragment