ಕೋವಿಡ್‌ನಿಂದ ಮತ್ತೆ ಇಬ್ಬರು ಗುಣ

BKT NEWS 3-2
Published on

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಮತ್ತು ಬಾಗಲಕೋಟೆಯ ಒಬ್ಬರು ಸೇರಿ ಇಬ್ಬರು ಕೋವಿಡ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಗುಣವಾದವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಢಾಣಕಶಿರೂರ ಗ್ರಾಮದ 50 ವರ್ಷದ ಪುರುಷ, ಬಾಗಲಕೋಟೆಯ 28 ವರ್ಷದ ಯುವಕ ಕೋವಿಡ್‌ನಿಂದ ಗುಣಮುಖರಾದವರು. ಜಿಲ್ಲಾ ಶಸಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಢಾಣಕಶಿರೂರ ಗ್ರಾಮದ ವ್ಯಕ್ತಿಗೆ ಪಿ-680 ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಮೇ 22 ರಂದು ಕೋವಿಡ್ ದೃಢಪಟ್ಟರೆ, ಬಾಗಲಕೋಟೆ ಪಿ-1391 ವ್ಯಕ್ತಿಗೆ ಮಹಾರಾಷ್ಟ್ರದ ಕೊಲ್ಹಾಪುರ ಪ್ರವಾಸದ ಹಿನ್ನೆಲೆ ಮೇ 19 ರಂದು ಸೋಂಕು ದೃಢಪಟ್ಟಿತ್ತು. ಜಿಲ್ಲಾ ಆಸ್ಪತ್ರೆಯಿಂದ ಕೈಗಳಿಗೆ ಶೀಲ್ ಹಾಕಿ 14 ದಿನ ಮನೆಯಲ್ಲಿಯೇ ಇರುವಂತೆ ಹೇಳಿ ಕಳುಹಿಸಿಕೊಡಲಾಯಿತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net