ಸ್ವಯಂ ಪ್ರೇರಣೆಯಿಂದ ನಿಧಿ ಸಮರ್ಪಣೆ

BKT 24-1
Published on

ಬಾಗಲಕೋಟೆ: ಅಯೋಧ್ಯೆಯಲ್ಲಿ ಬಹಳ ದಿನಗಳ ಕನಸು ನನಸಾಗುತ್ತಿದೆ. ಭಕ್ತರಿಂದ ಭಕ್ತರಿಗಾಗಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಲಿದ್ದು, ದೇಶಾದ್ಯಂತ ನಡೆಯುತ್ತಿರುವ ನಿಧಿ ಸಮರ್ಪಣೆ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುತ್ತಿದ್ದಾರೆ ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಅಭಿಯಾನ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರಿಂದ ನಿಧಿ ಸಂಗ್ರಹ ಅಭಿಯಾನದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಅಂದಾಜು 1500 ಕೋಟಿ ರೂ.ನಷ್ಟು ವೆಚ್ಚವಾಗಲಿದ್ದು, ಇದಕ್ಕೆ ದೇಶಾದ್ಯಂತ ಭಕ್ತರು ಸ್ವಯಂ ಪ್ರೇರಣೆಯಿಂದ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ ಎಂದು ಶ್ಲಾಸಿದರು.

ಉತ್ತರ ಸಹ ಪ್ರಾಂತ ಪ್ರಚಾರಕ ನರೇಂದ್ರಜೀ, ವಿಜಯಪುರ ವಿಭಾಗ ಪ್ರಚಾರಕ ದಯಾನಂದಜೀ, ಮಾಜಿ ಶಾಸಕ ಪಿ.ಎಚ್.ಪೂಜಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಉಪಾಧ್ಯಕ್ಷ ರಾಜು ರೇವಣಕರ, ಬಿಜೆಪಿ ಯುವ ಮುಖಂಡ ಬಸವರಾಜ ಯಂಕಂಚಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸದಸ್ಯೆ ಸವಿತಾ ಲೆಂಕೆಣ್ಣವರ, ಶಿವಬಸವ ಬಳ್ಳಾರಿ, ಕಿರಣ್ ಪವಾಡಶೆಟ್ಟರ, ಸಂತೋಷ ಜೋಶಿ, ಅಣ್ಣಪ್ಪ ಲೆಂಕೆಣ್ಣವರ, ಬಸವರಾಜ ಹೆಬ್ಬಳ್ಳಿ, ಅಂಬಾಜಿಜೋಶಿ, ಬಸವರಾಜ ಕಟಗೇರಿ, ಪ್ರಭು ಹಡಗಲಿ ಇತರರು ಅಭಿಯಾನದಲ್ಲಿ ಭಾಗವಹಿಸಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net