

ಬಾಗಲಕೋಟೆ: ನಗರದ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ತೊಗರಿಯನ್ನು ಖರೀದಿಸುವಂತೆ ಸರ್ಕಾರ ಆದೇಶಿಸಿದ್ದು, ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಹಿಂದೆ ಕೇವಲ ಐದಾರು ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತಿತ್ತು. ಆದರೆ, ಸರ್ಕಾರ ಈ ಬಾರಿ ಖರೀದಿ ಪ್ರಮಾಣವನ್ನು ಪ್ರತಿ ಎಕರೆಗೆ 7 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್‌ಗಳನ್ನು ಖರೀದಿಸಲಿದೆ ಎಂದು ಹೇಳಿದರು.
ಪ್ರತಿ ಕ್ವಿಂಟಾಲ್‌ಗಳಿಗೆ 6 ಸಾವಿರದಂತೆ ಗುಣಮಟ್ಟದ ತೊಗರಿಯನ್ನು ರೈತರಿಗೆ ಯಾವುದೇ ತೊಂದರೆಯಾಗದಂತೆ ಖರೀದಿಸಲಾಗುತ್ತದೆ. ಈಗಾಗಲೇ 6805 ರೈತರು ಖರೀದಿಗೆ ಹೆಸರು ನೋಂದಾಯಿಸಿದ್ದಾರೆ ಎಂದು ಹೇಳಿದರು.
ಬಾಗಲಕೋಟೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರುವ ಹಮಾಲರಿಗೆ 20 ವರ್ಷಗಳ ಹಿಂದೆ ಮನೆ ನಿರ್ಮಿಸಿ ನೀಡಲಾಗಿತ್ತು. ಅವುಗಳ ಮೇಲೆ ಸಾಲ ಇದ್ದು, ಬಡ್ಡಿ, ಚಕ್ರಬಡ್ಡಿ ಸರ್ಕಾರ ಮನ್ನಾ ಮಡುವಂತೆ ಉಸ್ತುವಾರಿ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಬಡ್ಡಿ, ಚಕ್ರಬಡ್ಡಿ ಮನ್ನಾ ಆಗಿದೆ. ಹಮಾಲರಿಂದ ಕೇವಲ ಅಸಲು ಪಾವತಿ ಮಾಡಿಕೊಳ್ಳಬೇಕು ಎಂದು ಎಪಿಎಂಸಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇನ್ನು ಬಾಗಲಕೋಟೆ ಎಪಿಎಂಸಿ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರಿಯಾಗಿ ಅನುಷ್ಠಾನಗೊಳಿಸುವಂತೆ ಎಪಿಎಂಸಿ ಕಾರ್ಯಾಧ್ಯಕ್ಷರಿಗೆ ಸೂಚಿಸಲಾಗಿದೆ ಎಂದರು.
ಎಪಿಎಂಸಿಯ ಅಧ್ಯಕ್ಷ ಕೃಷ್ಣಪ್ಪ ನಾಯಕ, ಕಾರ್ಯದರ್ಶಿ ಕುನ್ನಿಬಾವಿ, ಟಿಎಪಿಇಎಂಎಸ್ ಅಧ್ಯಕ್ಷ ಶೇಖರಪ್ಪ ಮಾಚಾ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಸಹಕಾರಿ ಸಂಘಗಳ ಉಪನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ, ಮಾರ್ಕೆಟಿಂಗ್ ೆಡರೇಷನ್ ಅಧಿಕಾರಿ ಸಂದೀಪ ಬಿ.ಜಿ., ಸಂಗಣ್ಣ ಕಲಾದಗಿ ಇತರರು ಇದ್ದರು.
EndFragment