ಶಾಸಕ ಚರಂತಿಮಠ ಚೆಕ್ ವಿತರಣೆ

BKT 1-3
Published on

ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾದ ಹಳೇ ಬಾಗಲಕೋಟೆಯ ಜೈನಪೇಟೆಯ ಶಂಕರಲಿಂಗ ದೇವಸ್ಥಾನ ಪುನರ್ ನಿರ್ಮಾಣ ಕಾಮಗಾರಿಗೆ ಬಿಟಿಡಿಎ ವತಿಯಿಂದ 10 ಲಕ್ಷ ರೂ.ಮೊತ್ತದ ಚೆಕ್‌ನ್ನು ಶಾಸಕ, ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ಮಂಗಳವಾರ ಶಂಕರಲಿಂಗ ದೇವಸ್ಥಾನ ಟ್ರಸ್ಟ್‌ನ ಸದಸ್ಯರಿಗೆ ನೀಡಿದರು.

ನಗರದ ಜೈನ್ ಪೇಟೆಯ ಶಂಕರಲಿಂಗ ದೇವಸ್ಥಾನದ 43 ಲಕ್ಷ ರೂ.ಮೊತ್ತದ ಪರಿಹಾರದಲ್ಲಿ ದೇವಸ್ಥಾನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಕ್ಕೆ 10 ಲಕ್ಷ ರೂ.ಚೆಕ್‌ನ್ನು ಶಾಸಕರು ನೀಡಿದರು. ಈ ಸಂದರ್ಭದಲ್ಲಿ ಬಿಟಿಡಿಎ ಪುನರ್ ವಸತಿ ಅಧಿಕಾರಿ ಗಣಪತಿ ಪಾಟೀಲ, ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರಲಿಂಗ ಗೂಗಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರಾದ ವೀರಪ್ಪ ಶಿರಗನ್ನವರ್ ,ಪ್ರಭಾಕರ್ ಬಣಗಾರ್, ಬಾಬು ಲುಕ್ ಸೇರಿದಂತೆ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net