

ಬಾಗಲಕೋಟೆ: ಆಡಿಟ್ ಆಫೀಸರ್ ಹಾಗೂ ಸರ್ಕಾರದ ಅಧಿಕಾರಿ ಅಂತ ಹೇಳಿ ವಂಚನೆ ಮಾಡುತ್ತಿದ್ದ ಖತರ್‌ನಾಕ ಕಳ್ಳನನ್ನು ಬಂಧಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಪ್ರಶಾಂತ ಟಿ.ಎಸ್. ಬಂಧಿತ ಆರೋಪಿ. 2020 ಆಗಸ್ಟ್‌ನಲ್ಲಿ ಆರೋಪಿ ಪ್ರಶಾಂತ ಆಡಿಟ್ ಆಫೀಸರ್ ಅಂತ ಹೇಳಿ ಬಾಗಲಕೋಟೆಯ ವಿದ್ಯಾಗಿರಿಯ ಶ್ರೀನಿಧಿ ಜ್ಯುವೆಲರ್ಸ್‌ನಲ್ಲಿ ಮೋಸದಿಂದ 10.90 ಲಕ್ಷೃ ಮೌಲ್ಯದ ವಿವಿಧ ನಮೂನೆಯ 218 ಗ್ರಾಂ ಚಿನ್ನಾಭರ ದೋಚಿ ಪರಾರಿಯಾಗಿದ್ದನು. ಈ ಬಗ್ಗೆ ಜ್ಯುವೆಲರ್ಸ್ ಮಾಲೀಕ ಶ್ರೀನಿವಾಸ ರಾಯ್ಕರ ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದರು. ಸಕಲೇಶಪುರ, ಬೆಂಗಳೂರು, ಕುಣಿಗಲ್, ಗೌರಿಬಿದನೂರು ಸೇರಿ ವಿವಿಧೆಡೆ ಆರೋಪಿಗಾಗಿ ಕಾರ್ಯಚರಣೆ ನಡೆಸಿದ್ದರು. ಕೊನೆಗೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಆರೋಪ ಪ್ರಶಾಂತ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಬಳಿಯಿದ್ದ 10.90 ಲಕ್ಷೃ ಮೌಲ್ಯದ 218 ಗ್ರಾಂ ಚಿನ್ನಾಭರಣ ಹಾಗೂ 1800 ನಗದು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್‌ಐಗಳಾದ ಜಿ.ಎಚ್.ಕಂಪ್ಲಿ, ಬಿ.ವಿ.ನ್ಯಾಮಗೌಡ ಹಾಗೂ ಸಿಬ್ಬಂದಿ ಶ್ರೀಶೈಲ ನಡಗೇರಿ, ಪ್ರಕಾಶ ನಾಯಕ, ಬೀರಪ್ಪ ಕುರಿ, ಬಲರಾಮ ಪವಾರ, ರಾಜು ಜಲಗೇರಿ, ಮಲ್ಲಯ್ಯ ಬಾರಾಗಣಿ, ಎಂ.ಎಂ. ಬೀಳಗಿ ಕಾರ್ಯಾಚರಣೆ ನಡೆಸಿದ್ದರು.
EndFragment