

ಬಗಡಗೇರಿ (ಕಲಘಟಗಿ ತಾ.): ಗ್ರಾಮದ ಸರ್ಕಾರಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 85.18ರಷ್ಟಾಗಿದೆ. ಪರೀಕ್ಷೆ ಬರೆದ 54 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 33 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, ಇಬ್ಬರು ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಗರ ನಾಗಪ್ಪ ನರೇಗಲ್ಲ ಶೇ. 95.68ರಷ್ಟು ಫಲಿತಾಂಶ ಪಡೆದು ಶಾಲೆಗೆ ಪ್ರಥಮ, ಭಾಗ್ಯಲಕ್ಷ್ಮೀ ಕುರ್ಡಿಕೇರಿ ಶೇ. 93.44 ದ್ವಿತೀಯ, ವಿಕಾಸ ಮಾಯಣ್ಣವರ ಶೇ. 93.28 ತೃತೀಯ, ರಾಜೇಶ್ವರಿ ಹೊಸಳ್ಳಿ ಶೇ. 87.84 ನಾಲ್ಕನೇ ಸ್ಥಾನ, ಕಾರ್ತಿಕ ಮಾಯಣ್ಣವರ ಶೇ. 85.92ರಷ್ಟು ಅಂಕ ಗಳಿಸಿ 5ನೇ ಸ್ಥಾನ ಗಳಿಸಿದ್ದಾರೆ.
ಭಾಗ್ಯಲಕ್ಷ್ಮೀ ಕುರ್ಡಿಕೇರಿ, ರಾಜೇಶ್ವರಿ ಹೊಸಳ್ಳಿ ಹಿಂದಿ ವಿಷಯದಲ್ಲಿ 100ಕ್ಕೆ 100 ಅಂಕ ಹಾಗೂ ಸಾಗರ ನರೇಗಲ್ಲ ಸಮಾಜ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ಊರಿನ ಹಿರಿಯರು ಅಭಿನಂದಿಸಿದ್ದಾರೆ.