

ಧಾರವಾಡ: ಇಲ್ಲಿನ ಸವದತ್ತಿ ರಸ್ತೆಯಲ್ಲಿರುವ ಜೆಎಸ್‌ಎಸ್ ಐಟಿಐ ಕಾಲೇಜಿನಲ್ಲಿ ರ‌್ಯಾಪಿಡ್ ಸಂಸ್ಥೆಯ ಸಹಯೋಗದಲ್ಲಿ 9 ದಿನಗಳ ಬ್ಯಾಗ್ ತಯಾರಿಕೆ ತರಬೇತಿ ಆಯೋಜಿಸಲಾಗಿದೆ. ತರಬೇತಿಯು ಆ.18ರಿಂದ 26ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯುತ್ತದೆ. 18ರಿಂದ 40 ವರ್ಷದ ಮಹಿಳೆಯರು ಭಾಗವಹಿಸಬಹುದು. ತರಬೇತಿ ಕೊನೆಯಲ್ಲಿ ತರಬೆೇತುದಾರರು ತಯಾರಿಸಿದ ಬ್ಯಾಗ್‌ಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ.