ಹೆತ್ತವರು ಖುಷಿ ಪಡುವಂತೆ ಸಾಧನೆ ಮಾಡಿ: ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸಲಹೆ

1 (2)
Published on

ಮಂಡ್ಯ: ತಂದೆ, ತಾಯಿ ಎಷ್ಟೇ ಕಷ್ಟವಾದರೂ ಸಹಿಸಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಾರೆ. ಅದಕ್ಕೆ ತಕ್ಕಂತೆ ಮಕ್ಕಳು ಕೂಡ ಚೆನ್ನಾಗಿ ಓದಿ ಹೆತ್ತವರು ಖುಷಿ ಪಡುವಂತಹ ಸಾಧನೆ ಮಾಡಬೇಕೆಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸಲಹೆ ನೀಡಿದರು.

ತಾಲೂಕಿನ ಗೋಪಾಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ತಮ್ಮ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಶಾಲೆಗಳು ದೇವಸ್ಥಾನವಿದ್ದಂತೆ. ಅಲ್ಲಿ ವ್ಯಾಸಂಗ ಮಾಡುವ ಮಕ್ಕಳು ದೇವರ ಸಮಾನ. ವಿದ್ಯಾರ್ಥಿಗಳು ಓದಿ ಉನ್ನತ ಸ್ಥಾನ ಅಲಂಕರಿಸಿದಾಗ ಪಾಲಕರು ಖುಷಿಪಡುತ್ತಾರೆ ಎಂದರು.

ಶಂಭು ಸೇವಾ ಟ್ರಸ್ಟ್ ವತಿಯಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಸಮವಸ್ತ್ರ ಹಾಗೂ ಪುಸ್ತಕಗಳನ್ನು ಕೊಡುತ್ತದೆ. ಅದೇ ರೀತಿ ಟ್ರಸ್ಟ್ ವತಿಯಿಂದ ಒಂದೇ ರೀತಿಯ ಬ್ಯಾಗ್ ವಿತರಣೆ ಮಾಡಿದರೆ ಮಕ್ಕಳನ್ನು ಸಮಾನವಾಗಿ ನೋಡಬಹುದು ಎಂದರು.

ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಪುಟ್ಟಮ್ಮ, ಕೆಂಪಚಾರಿ, ಸವಿತಾ, ಕವಿತಾ, ರವಿ, ಮುಖಂಡರಾದ ಸಿದ್ದರಾಜು, ಭಾನುಪ್ರಕಾಶ್, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net