ಮೈಸೂರು: ಕ್ರೀಡಾ ಭಾರತಿ ಜಿಲ್ಲಾ ಘಟಕದಿಂದ ಫೆ. 11ರಂದು ಬೋಗಾದಿಯ ಸ್ಪೋರ್ಟ್ಸ ಪಾರ್ಕ್‌ನಲ್ಲಿ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ರೀಡಾ ಭಾರತಿ ಜಿಲ್ಲಾ ಖಜಾಂಚಿ ಪ್ರಶಾಂತ್ ಹೇಳಿದರು.
ಜಿಎಸ್‌ಎಸ್ ಶ್ರೀಹರಿ, ಮೊಗ್ಗಿನ ಮನೆ ಪ್ರಶಾಂತ್ ಸೇರಿದಂತೆ ಇತರರು ಪಂದ್ಯಾವಳಿ ಪ್ರಾಯೋಜಕರಾಗಿದ್ದಾರೆ. ಈ ಕ್ರೀಡಾಕೂಟದಲ್ಲಿ ನಾಲ್ಕು ವಿಭಾಗಗಳಿದ್ದು, ಪ್ರವೇಶ ಶುಲ್ಕ 800 ರೂ. ನಿಗದಿಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೊದಲ ಸ್ಥಾನ ಗಳಿಸುವ ಎರಡು ತಂಡಗಳಿಗೆ ನಾಲ್ಕೂ ವಿಭಾಗದಲ್ಲಿ ಒಟ್ಟು 40 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಕ್ರೀಡಾ ಭಾರತಿ ಜಿಲ್ಲಾಧ್ಯಕ್ಷ ಅಮೃತ್ ಪುರೋಹಿತ್, ಜಿಎಸ್‌ಎಸ್ ಸಂಸ್ಥೆಯ ರೂಪಶ್ರೀ, ರಾಘವ್, ಶ್ರೀಕಾಂತ್ ಮತ್ತಿತರರಿದ್ದರು.