ರೋಟರಿ ಶಾಲೆಯಲ್ಲಿ ಬ್ಯಾಡ್ಮಿಂಟನ್​ ಪಂದ್ಯಾವಳಿ

IMG_20251008_205810_667.jpg
Published on

ಹುಬ್ಬಳ್ಳಿ: ಪದ್ಮಶ್ರೀ ಡಾ. ಎಂ.ಸಿ. ಮೋದಿ ಅವರ 109ನೇ ಜನ್ಮದಿನಾಚರಣೆ ಪ್ರಯುಕ್ತ ಇಲ್ಲಿಯ ನವನಗರ ರೋಟರಿ ಎಜುಕೇಶನ್ ಸೊಸೈಟಿ, ಇನ್ನರ್ ವೀಲ್ ಕ್ಲಬ್ ಮತ್ತು ನವನಗರ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನವನಗರ ರೋಟರಿ ಶಾಲೆಯಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ಡಾ. ಎಂ.ಸಿ. ಮೋದಿ ಮತ್ತು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಡಾ. ಎ.ಸಿ. ಡೇಕಾ ಅವರು ಮಾತನಾಡಿ, ಡಾ. ಮೋದಿಯವರ ಕೊಡುಗೆಗಳನ್ನು ಸ್ಮರಿಸಿದರು. ಅವರ ಹೆಸರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಅವರು 1983 -84 ಮತ್ತು 1984-85ರಲ್ಲಿ ನವನಗರದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದರು ಎಂದರು.

ಡಾ. ಬಿ.ಎಸ್. ಪಾಟೀಲ ಸಮಾರಂಭ ಉದ್ಘಾಟಿಸಿದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪಂದ್ಯಾವಳಿಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಜಿ. ಮಾಳಪೂರ, ಶರಣ ರಾಂಪುರ, ಸಂಗಮೇಶ, ಬಸವರಾಜ ಕಕೋಳ, ಶಶಿಕಾಂತ್ ಮಾಳಪೂರ, ಡಾ. ರವಿ ಮಾಳವದಕರ, ಶ್ರೀಕಾಂತ್ ಅಣ್ಣಿಗೇರಿ, ಮನೋಜ ಮನಗುಂಡಿ, ಬಿಂದುಮಾಧವ ದೇಸಾಯಿ, ಎಂ.ಸಿ. ಬೆಟಗೇರಿ ಹಾಗೂ ಇನ್ನರ್ ವೀಲ್ ಕ್ಲಬ್ ಸದಸ್ಯರು
ಉಪಸ್ಥಿತರಿದ್ದರು.

ಡಾ. ವಿಜಯಶ್ರೀ ಕಲಬುರ್ಗಿ ಸ್ವಾಗತಿಸಿದರು. ಸಂಜೋತ್ ಬೇವೂರ ಕಾರ್ಯಕ್ರಮ ನಿರೂಪಿಸಿದರು. ಶಂಕರ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net