

ಮಂಗಳೂರು : ನಗರದ ಕೆನರಾ ಕ್ಲಬ್ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದು ಸಂಸ್ಥೆಯ ಕಟ್ಟಡ ವಿನ್ಯಾಸ, ಸಭಾಂಗಣ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣ ನವೀಕರಣಗೊಂಡಿದೆ.
ಕ್ಲಬ್‌ನ ಹಿರಿಯ ಸದಸ್ಯ ಬ್ರಿಗೇಡಿಯರ್ ಐ. ಎನ್. ರೈ ಅವರು ಕ್ಲಬ್‌ನ ನೂತನ ಸಭಾಂಗಣ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಎಂ.ವಿ ಮಲ್ಯ ಅವರು ನವೀಕೃತ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಕೆನರಾ ಕ್ಲಬ್‌ನ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವವಹಿಸಿದ್ದರು. ಕಾರ್ಯದರ್ಶಿ ಜಯಂತ್ ಶೆಟ್ಟಿ, ಹಿರಿಯ ಸದಸ್ಯರಾದ ಡಾ. ದೇವದಾಸ್ ಶೆಟ್ಟಿ, ಸುರೇಂದ್ರ ಪ್ರಭು, ಮಾಜಿ ಅಧ್ಯಕ್ಷ ರಾಜೇಶ್, ಬ್ಯಾಡ್ಮಿಂಟನ್ ಆಟಗಾರರಾದ ಅರುಣ್ ನಾಯಕ್ , ವಿನೋದಾ ರಾವ್, ಸೂಜನ್ ರೆಬೆಲ್ಲೊ, ಪ್ರೀತಾ ಅಮ್ಮಣ್ಣ ಉಪಸ್ಥಿತರಿದ್ದರು.ವ್ಯವಸ್ಥಾಪಕ ರಾಲ್‌ಫೋರ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.