ಬ್ಯಾಡ್ಮಿಂಟನ್ ಸಾಧನೆ

IMG-20241225-WA0005_1-1.jpg
Published on

ಹುಬ್ಬಳ್ಳಿ: ವಿಜಯಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ನವೀನ್ ಪಾರ್ಕ್ ಆತ್ರೇಯ ಸ್ಪೋರ್ಟ್ಸ್ ಅಕಾಡೆಮಿಯ ಕೃತಿಕಾ ಸುಣಗಾರ 13 ವರ್ಷದೊಳಗಿನ ಸ್ಪರ್ಧೆಯಲ್ಲಿ ರನ್ನರ್ ಅಪ್ ಪಡೆದುಕೊಂಡಿದ್ದಾರೆ.

ಮುಖ್ಯ ಕೋಚ್ ನಾಗೇಂದ್ರ ಸಂಶಿ, ಕೋಚ್ ಸಾಗರ ಸಂಶಿ ಅವರು ತರಬೇತಿ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಣಗಾರ ಅವರ ಪುತ್ರಿಯಾಗಿರುವ ಕೃತಿಕಾ ಸಾಧನೆಗೆ ಅಕಾಡೆಮಿ ಹಾಗೂ ನವೀನ ಪಾರ್ಕ್ ನಿವಾಸಿಗಳು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net