ಬೈಕ್ ಡಿಕ್ಕಿಯಾಗಿ ನೀರಿನ ಗಾಡಿ ತೆಗೆದುಕೊಂಡು ಹೋಗುತ್ತಿದ್ದ ವೃದ್ಧ ಸಾವು

Crime Logo
Published on

ಬ್ಯಾಡಗಿ: ಬೈಕ್ ಡಿಕ್ಕಿಯಾಗಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಬುಧವಾರ ಸಂಭವಿಸಿದೆ.
ಪಟ್ಟಣದ ಸಂಗಮೇಶ್ವರ ನಗರದ ಪಂಚಾಂಗಪ್ಪ ಹನುಮಂತಪ್ಪ ಜೋಗಿಹಳ್ಳಿ (71) ಮೃತ ವೃದ್ಧ.
ಇವರು ರಸ್ತೆ ಬದಿ ನೀರಿನ ಗಾಡಿ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬೈಕ್ ಸವಾರನೊಬ್ಬ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net