ಕಡಲ ತೀರದಲ್ಲಿ ಬೂತಾಯಿ ಮೀನಿಗೆ ಮುಗಿಬಿದ್ದ ಜನ

udp-19-fish (2)
Published on

ಉಡುಪಿ: ಬಡನಿಡಿಯೂರು ತೊಟ್ಟಂನ ಕದಿಕೆ ಕಡಲ ತೀರದಲ್ಲಿ ಮತ್ಸೃಪ್ರಿಯರಿಗೆ ಸೋಮವಾರ ಸುಗ್ಗಿ. ಅಲೆಯೊಂದಿಗೆ ದಡಕ್ಕೆ ಅಪ್ಪಳಿಸಿದ್ದ ರಾಶಿ ರಾಶಿ ಬೂತಾಯಿ ಮೀನು ಸಂಗ್ರಹಿಸಲು ನೂರಾರು ಮಂದಿ ಮುಗಿಬಿದ್ದಿದ್ದರು.

ಮಧ್ಯಾಹ್ನ 12 ಗಂಟೆ ಬಳಿಕ ದಡಕ್ಕೆ ಮೀನುಗಳು ತೇಲಿಬಂದಿದ್ದು, ವಿಷಯ ತಿಳಿದ ಅಪಾರ ಸಂಖ್ಯೆಯ ಮೀನುಪ್ರಿಯರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಈ ಭಾಗದಲ್ಲಿ ಮೊದಲ ಬಾರಿಗೆ ಭಾರೀ ಸಂಖ್ಯೆಯ ಮೀನುಗಳು ದಡಕ್ಕೆ ಬಂದಿದ್ದು, ಸ್ಥಳೀಯರು ಕೈಗೆ ಸಿಕ್ಕಿದಷ್ಟು ಮೀನು ಬಾಚಿಕೊಂಡಿದ್ದಾರೆ. ಕೆಲವರಂತೂ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಸುಮಾರು 800 ಕೆಜಿ ಮೀನು ಲಭಿಸಿದೆ.

ಸಮುದ್ರದಲ್ಲಿ ಮೀನಿನ ಹಿಂಡು ಪಥ ಬದಲಾಯಿಸಿ ತೀರಕ್ಕೆ ಬಂದ ಸಂದರ್ಭದಲ್ಲಿ ಭಾರೀ ಅಲೆಗಳ ಅಬ್ಬರಕ್ಕೆ ಸಿಕ್ಕಿ ದಡಕ್ಕೆ ಬಂದು ಬೀಳುತ್ತವೆ. ಈ ಹಿಂದೆ ಕಾಪು, ಎರ್ಮಾಳ್, ಮಟ್ಟು ಪ್ರದೇಶದಲ್ಲೂ ಮೀನಿನ ರಾಶಿ ದೊರಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net