ಆಸ್ತಿ ವಿಚಾರವಾಗಿ ಕೊಲೆಗೆ ಯತ್ನ

BDM 20-1
Published on

ಬಾದಾಮಿ: ತಾಲೂಕಿನ ತಳಕವಾಡ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಗ್ರಾಮದ ಚಂದ್ರಶೇಖರಯ್ಯ ಪೂಜಾರ (48) ಮೇಲೆ ಏಳು ಜನರ ತಂಡ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಡಿ.13 ರಂದು ಘಟನೆ ನಡೆದಿದ್ದು, ಹೊಲದಲ್ಲಿದ್ದ ಚಂದ್ರಶೇಖರಯ್ಯ ಮೇಲೆ ಅದೇ ಗ್ರಾಮದ ಬಸಯ್ಯ ಶರಣಯ್ಯ ಮೇಟಿ, ವೀರಣ್ಣ ಯಲ್ಲಪ್ಪ ಮಾದರ, ವಿಠ್ಠಲ ಯಲ್ಲಪ್ಪ ಮಾದರ, ಶರಣವ್ವ ಯಲ್ಲಪ್ಪ ಮಾದರ, ತರುಖ ಖಾಜಿ, ಶರಣಯ್ಯ ಮೇಟಿ, ನಿಂಗಯ್ಯ ಹಿರೇಮಠ ಎಂಬುವವರು ಸೇರಿಕೊಂಡು ಕಬ್ಬಿನ ಕೊಯ್ತದಿಂದ ಬೆನ್ನಿಗೆ, ಬಲಗೈ ಎಡಗೈಗೆ, ಎಡಗಾಲು ತೊಡೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಗಂಭೀರ ಗಾಯಗೊಂಡಿರುವ ವ್ಯಕ್ತಿ ಸದ್ಯ ಬಾದಾಮಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಬಂಧನ ಇಲ್ಲ
ಘಟನೆ ನಡೆದು ಒಂದು ವಾರ ಗತಿಸಿದರೂ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಪ್ರಭಾವಿಗಳ ಕೈವಾಡವಿದೆ ಎಂದು ಗಂಭೀರ ಗಾಯಗೊಂಡಿರುವ ಚಂದ್ರಶೇಖರಯ್ಯ ಪೂಜಾರ ಆರೋಪಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net