ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಒತ್ತಾಯ

BDM NEWS 24-2
Published on

ಬಾದಾಮಿ: ಸರ್ವೋಚ್ಚ ನ್ಯಾಯಾಲಯ ನೀಡಿರುವ ನೇರ ನೇಮಕಾತಿ ಮತ್ತು ಬಡ್ತಿ ಮೀಸಲಾತಿ ಸಂವಿಧಾನದ ಪರಿಚ್ಚೇದ 16(4) ಮೂಲಭೂತ ಹಕ್ಕಲ್ಲ ಎಂಬ ಆದೇಶ ಕುರಿತು ರಾಜ್ಯ, ಕೇಂದ್ರ ಸರ್ಕಾರ ಮರು ಪರಿಶೀಲನೆ ಅರ್ಜಿ ಸಲ್ಲಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು .

ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಘಟಕ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ತಾಲೂಕಾಧ್ಯಕ್ಷ ಸುರೇಶ ಮನ್ನೇರಿ, ಶಿವಾನಂದ ಮುಮ್ಮರಡ್ಡಿಕೊಪ್ಪ, ಆರ್.ಡಿ.ದಳವಾಯಿ, ಮಹೇಶ ಹೊಸಗೌಡ್ರ, ರಾಮವ್ವ ಪೂಜಾರ, ವಿ.ಆರ್. ಚವಾಣ್, ಉಮೇಶ ಪೂಜಾರಿ, ಬಸವರಾಜ ತಳವಾರ, ಶ್ರವಣ ಖಾತೆದಾರ, ಆನಂದ ದೊಡಮನಿ, ಮುತ್ತಣ್ಣ ಗಾಜಿ, ಪ್ರವೀಣ ಜ್ಯೋತಿ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net