ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ಮಾಡಿ

BDM 13-1
Published on

ಬಾದಾಮಿ: ಮುಂಬರುವ 2021ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಈಗಿನಿಂದಲೇ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ಮಾಡಿ ಶಿಕ್ಷಕರಿಗೆ ದತ್ತು ನೀಡುವ ಮೂಲಕ ಉತ್ತಮ ಲಿತಾಂಶ ಬರಲು ಪ್ರಯತ್ನಿಸಬೇಕು ಎಂದು ತಾಪಂ ಇಒ ಡಾ.ಪುನೀತ ಬಿ.ಆರ್. ಹೇಳಿದರು.

ಸ್ಥಳೀಯ ತಾ.ಪಂ. ಸಭಾಭವನದಲ್ಲಿ ಸೋಮವಾರ ನಡೆದ ಶಿಕ್ಷಣ ಇಲಾಖೆ ಮೇಲ್ವಿಚಾರಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ದತ್ತು ಪಡೆದ ಶಿಕ್ಷಕರು ಪ್ರತಿದಿನ ಹೋಂ ವರ್ಕ್ ನೀಡಿದ ಬಗ್ಗೆ ಮೇಲ್ವಿಚಾರಣೆ ಮಾಡಿ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ವಿಸಿನ್ 2021ರಲ್ಲಿ ತಾಲೂಕಿನ ಲಿತಾಂಶ ಶೇ.95 ಬರಲು ಶ್ರಮಿಸಬೇಕು ಎಂದು ಹೇಳಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಿಚನ್ ಗಾರ್ಡನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶಾಲೆ ಆವರಣದಲ್ಲಿ ಬಿಸಿಯೂಟಕ್ಕೆ ಅಗತ್ಯವಾದ ಕಾಯಿಪಲ್ಲೆಗಳನ್ನು ಬೆಳೆಯಬಹುದು. ತಾ.ಪಂ. ಅನುದಾನದಲ್ಲಿ ಕಾಂಪೌಂಡ್, ನೀರಿನ ಸೌಲಭ್ಯ, ಶೌಚಗೃಹ ಮಳೆ ನೀರು ಕೊಯ್ಲು ವ್ಯವಸ್ಥೆ ಮುಂತಾದ ಸೌಲಭ್ಯ ಮಾಡಲು 2021-22ರ ಕ್ರಿಯಾ ಯೋಜನೆಯಲ್ಲಿ ಬೇಡಿಕೆಯನ್ನು ಸಂಬಂಧಿಸಿದ ಗ್ರಾ.ಪಂ. ಪಿಡಿಒ ಅವರಿಗೆ ಸಲ್ಲಿಸಬೇಕು. ಪ್ರತಿ ಗ್ರಾಮೀಣ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಮಾಡಿಕೊಂಡು ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಮಾಗಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿದ ಗ್ರಾ.ಪಂ.ಗೆ ನೀಡಬೇಕು. ಶಾಲೆಗಳ ಭೌತಿಕ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.

ಶಿಕ್ಷಣ ಸಂಯೋಜಕ ವಿ.ಎಸ್. ಹಿರೇಮಠ ಮಾತನಾಡಿದರು. ತಾಲೂಕು ಶಿಕ್ಷಣ ಸಂಯೋಜಕ ಹನುಮಂತರಾಜು, ಎಂ.ಎಚ್. ಮೂಲಿಮನಿ, ವಿ.ಟಿ. ದ್ಯಾವನ್ನವರ, ಬಿ.ಆರ್.ಪಿ.ಗಳಾದ ಎಸ್.ವೈ. ಮಡಿವಾಳರ, ಬಿ.ಎ್. ಕುಂಬಾರ, ಎಸ್.ಎಸ್. ಯಲಿಗಾರ ಸೇರಿ ತಾಲೂಕಿನ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಸಿ.ಆರ್.ಪಿ. ಆರ್.ಎಂ. ಸಾರವಾಡ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ವಿ.ಎಸ್. ಹಿರೇಮಠ ವಂದಿಸಿದರು.

StartFragment

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net